Site icon PowerTV

ಕಾಂಗ್ರೆಸ್ ವೋಟಿಗಾಗಿ ಮುಸ್ಲಿಮರನ್ನು ಬಳಸಿಕೊಂಡಿದೆ : ಕೆ.ಎಸ್.ಈಶ್ವರಪ್ಪ

ಬಾಗಲಕೋಟೆ : ಕಾಂಗ್ರೆಸ್ ಕೇವಲ ವೋಟಿಗಾಗಿ ಮುಸ್ಲಿಮರನ್ನು ಬಳಸಿಕೊಂಡಿದೆ. ಮುಸ್ಲಿಮರು ಕೈಬಿಟ್ಟರೆ ಕಾಂಗ್ರೆಸ್ ಉಸಿರುಗಟ್ಟಿ ಸಾಯುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಸಲ್ಮಾನರಿಗೆ ಇದು ಅರ್ಥವಾಗುತ್ತಿದೆ. ಬಿಜೆಪಿ ಜೊತೆಗೆ ಹಿಂದುಳಿದವರು,ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ ಮುಸಲ್ಮಾನರು ಕೂಡ ಬಿಜೆಪಿಗೆ ಬರುವುದಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡುತ್ತಾ ಇದ್ದಾರೆ. ಕೇಂದ್ರ ಮಂತ್ರಿಮಂಡಲದ‌ ವಿಸ್ತರಣೆ ಸಂದರ್ಭದಲ್ಲಿ ದಲಿತರು, ಹಿಂದುಳಿದವರಿಗೆ ಪ್ರಧಾನಿ ಮೋದಿ ಹೆಚ್ಚಿನ ಅವಕಾಶ ನೀಡಿದ್ದಾರೆ.ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬರುವುದಾದರೆ ಸ್ವಾಗತ. ಆದರೆ ಯಾವ ಕಾರಣಕ್ಕೂ ಸಿ.ಎಂ.ಇಬ್ರಾಹಿಂರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಮುಸಲ್ಮಾನರ ನಾಯಕ‌ ಸಿ.ಎಂ. ಇಬ್ರಾಹಿಂ ಯಾಕೆ ಈಗ ಕಾಂಗ್ರೆಸ್ ಪಕ್ಷ ಬಿಡುತ್ತಿದ್ದಾರೆ. ಈಗ ಜಮೀರ್ ಅಹ್ಮದ್ ಕೂಡ ಎಲ್ಲಾದ್ರು ಕಾಂಗ್ರೆಸ್ಸಿನಲ್ಲಿ ಕಾಣಿಸಿಕೊಳ್ಳುತ್ತಾರಾ? ಸಿದ್ದರಾಮಯ್ಯ ಹಿಂದೆನೂ ಜಮೀರ್ ಅಹ್ಮದ್ ಕಾಣಿಸೊಲ್ಲ. ಡಿ.ಕೆ. ಶಿವಕುಮಾರ್​ ಹಿಂದೆನೂ ಜಮೀರ್ ಅಹ್ಮದ್ ಕಾಣಿಸುವುದಿಲ್ಲ. ಇದರಲ್ಲೇ ಎಲ್ಲವೂ ಅರ್ಥವಾಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

Exit mobile version