Site icon PowerTV

ರಾಜಕೀಯ ಮರುಪ್ರವೇಶಕ್ಕೆ ಗಣಿಧಣಿ ರಣತಂತ್ರ

ಬಳ್ಳಾರಿ: ಬಳ್ಳಾರಿಯ ಗಣಿಗಾರಿಕೆಯ ಕಿಂಗ್ ಎನಿಸಿಕೊಂಡ, ಗಣಿ ಅಕ್ರಮಗಳ ಆರೋಪದಲ್ಲಿ ವರ್ಷಗಟ್ಟಲೆ ಜೈಲು ಕಂಬಿ ಎಣಿಸಿದ, ಮಗಳ ಮದುವೆಗಾಗಿ ಕೊವಿಡ್ ಸಮಯದಲ್ಲಿ 500 ಕೋಟಿ ಖರ್ಚು ಮಾಡಿದ ಎಂದು ಜನರಾಡಿಕೊಂಡ ಬಳ್ಳಾರಿ ಗಣಿ ಧಣಿ ಜನಾರ್ಧನರೆಡ್ಡಿ ಈಗ ಮತ್ತೆ ರಾಜಕೀಯಕ್ಕೆ ಬರಲು ಹರಸಹಾಸ ಪಡುತ್ತಿದ್ದಾರೆ.

ಆದ್ದರಿಂದಲೇ ರಾಜ್ಯ ರಾಜಕೀಯದಲ್ಲಿ ಮತ್ತೆ ಬಳ್ಳಾರಿ ರಾಜಕೀಯ ಸಂಚಲನ ಮೂಡಿಸಿದೆ. ಬಿಜೆಪಿಗೆ ಪುನರ್ ಪ್ರವೇಶ ಮಾಡಲು ಜನಾರ್ದನ ರೆಡ್ಡಿ ರಣತಂತ್ರ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ರಹಸ್ಯ ಸಭೆ ಮಾಡಿರುವ ಜನಾರ್ದನ ರೆಡ್ಡಿ, ಆಪ್ತ ಸ್ನೇಹಿತ ಶ್ರೀರಾಮುಲು ಮೂಲಕ ಹೈಕಮಾಂಡ್ ಮನವೊಲಿಕೆಗೆ ಯತ್ನ ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಿಜೆಪಿಗೆ ಬರಲು ರೆಡ್ಡಿ ಆಸಕ್ತಿ ತೋರಿದರೂ ಸಕ್ರಿಯ ರಾಜಕೀಯಕ್ಕೆ ಹೈಕಮಾಂಡ್‌ ಗ್ರೀನ್ ಸಿಗ್ನಲ್ ನೀಡುವುದು ಅನುಮಾನ ಎನ್ನಲಾಗುತ್ತಿದೆ.

Exit mobile version