Site icon PowerTV

ತಮ್ಮದೇ ಬಜೆಟ್ ಕೂಸನ್ನು ಮುದ್ದಾಡಿದ ಮೋದಿ!

ನವದೆಹಲಿ: ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಪ್ರಧಾನಿ ಮೋದಿಯವರಿಗೆ ತಮ್ಮದೇ ಕೂಸಾದ ಬಜೆಟ್ ಬಗ್ಗೆ ಪ್ರೀತಿ ಉಕ್ಕಿ ಹರಿದಿದೆ. ತಾವೇ ಹುಟ್ಟುಹಾಕಿದ ತಮ್ಮದೇ ಸರ್ಕಾರದ ಕೇಂದ್ರ ಬಜೆಟ್ ಬಗ್ಗೆ ಮೋದಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ!

ಬಡವರ ಏಳಿಗೆಯೇ ನಮ್ಮ ಉದ್ದೇಶ. ಪ್ರತಿ ಮನೆಗೆ ಶೌಚಾಲಯ ವ್ಯವಸ್ಥೆಯ ಬಗ್ಗೆ ಬಜೆಟ್​ನಲ್ಲಿ ಒತ್ತು ಕೊಟ್ಟಿದ್ದೇವೆ. ರೈತರ ಅಭಿವೃದ್ದಿಗೆ ಬಜೆಟ್​ನಲ್ಲಿ ಅನುದಾನ ನೀಡಿದ್ದೇವೆ. ಗಂಗಾ ನದಿ ತೀರದ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ. ಉದ್ಯೋಗ, ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಈ ವರ್ಷದಿಂದಲೇ ಡಿಜಿಟಲ್ ಕರೆನ್ಸಿ ಜಾರಿ ಮಾಡಲಾಗುತ್ತದೆ. ಹೀಗೆ ತಮ್ಮದೇ ಬಜೆಟ್ಟನ್ನು ಮೋದಿ ಹಾಡಿ ಹೊಗಳಿದ್ದಾರೆ.

Exit mobile version