Site icon PowerTV

ಶಿವರಾಮೇಗೌಡರ ವಿರುದ್ದ ಪ್ರತಿಭಟನೆ

ಮದ್ದೂರು: ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ದಿ.ಮಾದೇಗೌಡ ಅಭಿಮಾನಿಗಳಿಂದ ಮಂಡ್ಯ ಜಿಲ್ಲೆ ಮದ್ದೂರಿನ TB ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು. ಮಾದೇಗೌಡರ ಬಗ್ಗೆ LRS ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೋ ಒಂದು ವೈರಲ್ ಆದ ಹಿನ್ನೆಲೆ ಶಿವರಾಮೇಗೌಡ ವಿರುದ್ಧ ಪ್ರತಿಭಟನೆ ನಡೆಯಿತು.

“ಶಿವರಾಮೇಗೌಡ ಮಂಡ್ಯ ಜಿಲ್ಲೆಗೆ ಕಳಂಕ. ಶಿವರಾಮೇಗೌಡರನ್ನ ಜೆಡಿಎಸ್‌‌ನಿಂದ ಉಚ್ಛಾಟಿಸಬೇಕು. ಮತ್ತೊಮ್ಮೆ ಜಿಲ್ಲೆಯ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟರೆ ಉಗ್ರ ಹೋರಾಟ ಮಾಡುವೆವು” ಎಂದು ಘೋಷಣೆ ಕೂಗಿ ದಿ.ಮಾದೇಗೌಡ ಅಭಿಮಾನಿಗಳು ಎಚ್ಚರಿಕೆಯನ್ನ ನೀಡಿದರು. ಅಲ್ಲದೆ, ಶಿವರಾಮೇಗೌಡರ ಭಾವಚಿತ್ರವನ್ನ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

Exit mobile version