Site icon PowerTV

ನಾನೇನು ಇವರ ರೀತಿ ಕನಕಪುರದ ಬಂಡೆ ಹೊಡೆದಿಲ್ಲ:ಹೆಚ್‌ಡಿಕೆ

ರಾಮನಗರ:ನಾನೇನು ಇವರ ರೀತಿ ಕನಕಪುರದ ಬಂಡೆ ಹೊಡೆದಿಲ್ಲ ಇವರು ಈಗ ರಾಜಕೀಯಕ್ಕೆ ಬಂದವರು ಎಂದು ಸಂಸದ ಡಿ.ಕೆ.ಸುರೇಶ್‌ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮೇಲೆ ಆರೋಪ ಮಾಡಿದ್ರೆ ನಾನು ಸುಮ್ಮನಿರೋಲ್ಲ ನನ್ನನ್ನು ಸುಳ್ಳುಗಾರ ಎನ್ನುತ್ತಾರೆ ಇವರು ಏನು ಮಾಡಿದ್ದಾರೆ..? ನಾನು ಮೂರು ಸೇತುವೆ ನಿರ್ಮಾಣ ಮಾಡಲು ಹೊರಟಿದ್ದೆ .ನಾನು ಸಂಸದನಾಗಿ 3 ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದೆ ವಾಜಪೇಯಿ ಅವಧಿಯಲ್ಲಿ ಪಿಎಂಜಿಎಸ್ ಯೋಜನೆ ಆಯ್ತು ಈ ಯೋಜನೆ ತಂದ ಕೀರ್ತಿ ದೇವೇಗೌಡರಿಗೆ ಸಲ್ಲಬೇಕು.ಯಾರೋ ಮಾಡಿದಕ್ಕೆ ಹೆಸರು ಹಾಕಿಕೊಳ್ಳಲು ಇವರು ಬರ್ತಾರೆ.ನೀರು ನಮ್ಮ ಹಕ್ಕು ಅಂತಾರೆ ಕೊವಿಡ್ ಸಮಯದಲ್ಲಿ ಪಾದಯಾತ್ರೆ ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇವರಿಂದ ಕಲಿಯಬೇಕಿಲ್ಲ.ರಾಮನಗರದಲ್ಲಿ ಜೆಡಿಎಸ್​ ಅಲುಗಾಡಿಸಲು ಆಗಲ್ಲ. ಇಂತಹ ಪಾದಯಾತ್ರೆ ನಾನು ಎಷ್ಟೋ ನೋಡಿದ್ದೇನೆ ಎಂದು ಬಿಡದಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹೇಳಿದ್ದಾರೆ.

Exit mobile version