Site icon PowerTV

ಶಿವರಾಮೇಗೌಡರ ಆಡಿಯೋ ವೈರಲ್ ಹಿನ್ನೆಲೆ : ‘ಶಿಸ್ತು ಕ್ರಮಕ್ಕೆ JDS ತೀರ್ಮಾನ’

ರಾಜ್ಯ : ಜೆಡಿಎಸ್ ಮಾಜಿ ಸಂಸದ ಎಲ್ .ಆರ್ ಶಿವರಾಮೇಗೌಡರ ಆಡಿಯೋ ವೈರಲ್ ವಿಚಾರದಲ್ಲಿ ಶಿವರಾಮೇಗೌಡ ಮೇಲೆ ಶಿಸ್ತು ಕ್ರಮಕ್ಕೆ ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆಡಿಯೋದಲ್ಲಿ ದಿವಂಗತ ಸಂಸದ, ಹಿರಿಯ ನಾಯಕ ಜಿ. ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂದು ಶಿವರಾಮೇಗೌಡ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ, ನಾನು ಈ ವಿಚಾರವನ್ನ ಇಲ್ಲಿಗೆ ನಿಲ್ಲಿಸುತ್ತೇನೆ. ನಾನು ಮಾದೇಗೌಡರ ಬಗ್ಗೆ ಈಗಲೂ ಗೌರವ ಇಟ್ಟುಕೊಂಡಿದ್ದೇನೆ. ಇದನ್ನೆಲ್ಲಾ ಬೆಳೆಸಬೇಕು ಅಂದ್ರೆ ನಾನು ಎಲ್ಲದಕ್ಕೂ ರೆಡಿ.

ಸತ್ತವರ ಬಗ್ಗೆ ಇಷ್ಟೊಂದು ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂದು ವೀಡಿಯೋ ಬಿಡುಗಡೆ ಮಾಡಿ ಮಧು ಮಾದೇಗೌಡರ ಹೇಳಿಕೆಗೆ ಎಲ್.ಆರ್. ಶಿವರಾಮೇಗೌಡ ತಿರುಗೇಟು‌ ಕೊಟ್ಟಿದ್ದಾರೆ.ಹೀಗಾಗಿ ಶಿವರಾಮೇಗೌಡರ ವರ್ತನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು, ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ.

Exit mobile version