Site icon PowerTV

‘ಕೈ’ ಬಿಟ್ಟ ಸಿ.ಎಂ ಇಬ್ರಾಹಿಂ

ಬೆಂಗಳೂರು : ಪರಿಷತ್ ವಿಪಕ್ಷ ಸ್ಥಾನ ಕೈ ತಪ್ಪಿದ್ದರಿಂದ ಕಾಂಗ್ರೆಸ್ ಪಕ್ಷ ತೊರೆಯಲು ಸಿದ್ಧರಾಗಿರುವ ಸಿಎಂ ಇಬ್ರಾಹಿಂ ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಜೊತೆ ಕಾಂಗ್ರೆಸ್ ತೊರೆಯುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ತೃಣಮೂಲ ಕಾಂಗ್ರೆಸ್‌ ಮೂಲ ಕಾಂಗ್ರೆಸ್‌ ಬಲಪಡಿಸಲು ಮಮತಾ ಬ್ಯಾನರ್ಜಿ ಕಸರತ್ತು ನಡೆಸುತ್ತಿದ್ದಾರೆ. ಕೆಲ ಕಾಂಗ್ರೆಸ್ ನಾಯಕರನ್ನ ಸೆಳೆಯೋ ಪ್ರಯತ್ನವನ್ನ ಪ್ರಶಾಂತ್ ಕಿಶೋರ್ ಮೂಲಕ ಮಾತನಾಡಿಸುತ್ತಿದ್ದಾರೆ. ಈ ಮಧ್ಯ ಜೆಡಿಎಸ್ ನಾಯಕರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದು, ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ ಹೇಳುವುದು ನಿಶ್ಚಿತವಾಗಿದೆ.

Exit mobile version