Site icon PowerTV

ವಿಶ್ವಕಪ್​ನ ಅಂಡರ್ 19 ರೋಮಾಂಚಕ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಗೆಲುವು

ಸೆಂಟ್ ಜ್ಹೋನ್ಸ್ (ಆಂಟಿಗುವಾ) : 19 ವರ್ಷದೊಳಗಿನ ಪುರುಷರ ವಿಶ್ವಕಪ್ ಕ್ರಿಕೆಟ್​ನ ರೋಮಾಂಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನವು ಶ್ರೀಲಂಕಾ ತಂಡವನ್ನು ಸೋಲಿಸಿ ಸೆಮಿಫೈನಲ್​ಗೆ ಮುನ್ನಡೆಯಿತು. ಕಡಿಮೆ ಮೊತ್ತದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ಅಫ್ಘನ್ ತಂಡವನ್ನು ಕಟ್ಟಿಹಾಕಿತು. ರನ್ ಮಾಡಲು ತಿಣುಕಾಡಿದ ಅಫ್ಘನ್ ಹುಡುಗರು ಗಳಿಸಿದ್ದು ಕೇವಲ 135 ರನ್ನುಗಳು ಮಾತ್ರ.

ಆದರೆ ನಂತರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅಫ್ಘನ್ ತಂಡ ಶ್ರೀಲಂಕಾ ತಂಡದ ಬ್ಯಾಟರ್​ಗಳನ್ನು ಬಗ್ಗುಬಡಿದರು. ಚಾಂಪಿಯನ್ ಶ್ರೀಲಂಕಾ ತಂಡವು ಕೇವಲ 112ರನ್ನುಗಳಿಗೆ ಆಲೌಟ್ ಆಯಿತು. ಫೆಬ್ರವರಿ 1ರಂದು ಸರ್ ವಿವ್ ರಿಚರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮೊದಲ ಸೂಪರ್​ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನವು ಈಗ ಇಂಗ್ಲೆಂಡನ್ನು ಎದುರಿಸಲಿದೆ.

Exit mobile version