Site icon PowerTV

ಪಂಜಾಬ್; ಸಿಎಂ ಅಭ್ಯರ್ಥಿ ಘೋಷಣೆಗೆ ನಾಯಕರ ಪಟ್ಟು

ಪಂಜಾಬ್: ಪಂಜಾಬ್ ರಾಜ್ಯದಲ್ಲಿ ಈಗ ಚುನಾವಣೆ ಪರ್ವ. ವಿಧಾನಸಭೆಯಲ್ಲಿ ಸಾಮೂಹಿಕ ನಾಯಕತ್ವದಡಿ ಹೋಗುವುದಕ್ಕಿಂತ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸಿ ಚುನಾವಣೆಯನ್ನು ಎದುರಿಸೋಣ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪಂಜಾಬ್ ನ ಜಲಂದರ್ ನಲ್ಲಿ ನಿನ್ನೆ ಪಂಜಾಬ್ ಫತೆಹ್ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಇಬ್ಬರೂ ಸಿಎಂ ಅಭ್ಯರ್ಥಿ ಹೆಸರಿನ ಘೋಷಣೆ ವಿಷಯವನ್ನು ಚರ್ಚಿಸಿದರು ಎಂದರು.

Exit mobile version