Site icon PowerTV

ಡಿಕೆ ಬ್ರದರ್ಸ್‌ ವಿರುದ್ಧ ಹೆಚ್‌ಡಿಕೆ ಗರಂ

ಚನ್ನಪಟ್ಟಣ:ಹೆಚ್‌.ಡಿ.ಕುಮಾರಸ್ವಾಮಿಯನ್ನ ಡಿಕೆಶಿ ಟಾರ್ಗೆಟ್ ಮಾಡಿರುವ ವಿಚಾರದ ಕುರಿತು ನನಗೂ ಡಿ.ಕೆ.ಶಿವಕುಮಾರ್‌ ಅವರಿಗೂ ಏನು ಸಂಬಂಧ..? ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿಯನ್ನ ರಾಮನಗರದಿಂದ ಖಾಲಿ ಮಾಡಿಸೋಕೆ ಟಾರ್ಗೆಟ್‌ ಮಾಡಿದ್ದಾರೆ.ರಾಮನಗರದಿಂದ ನನ್ನನ್ನ ಖಾಲಿ ಮಾಡಿಸೋಕೆ ಆಗುತ್ತಾ..? ರಾಮನಗರ ಜಿಲ್ಲೆಯನ್ನೇ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.ಹಣ, ದಬ್ಬಾಳಿಕೆ ಮೂಲಕ‌ ನನ್ನನ್ನ ಬಗ್ಗುಬಡಿಯುತ್ತೇನೆ ಅಂದುಕೊಂಡಿದ್ದಾರೆ.ನನ್ನನ್ನ ಬಗ್ಗುಬಡಿಯಲು ಅವರು 10 ಜನುಮ ಎತ್ತಿ ಬರಬೇಕು.ಜಿಲ್ಲೆಯ ಜನತೆಗೂ ದೇವೇಗೌಡರ ಕುಟುಂಬಕ್ಕೂ ಪೂರ್ವ ಜನ್ಮದ ಸಂಬಂಧ ಇದೆ.ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಲು ಹೊರಟ್ಟಿದ್ದಾರೆ.ನಮ್ಮ ದುಡಿಮೆ, ಪ್ರೀತಿ ವಿಶ್ವಾಸ ಇದ್ರೆ ಮಾತ್ರ ಇಲ್ಲಿ ಉಳಿಯಲು ಸಾಧ್ಯ.ಇದಲ್ಲದೇ ಹಣಕ್ಕೆ ಜನರು ಮಾರು ಹೋಗಲ್ಲ‌ ಎಂಬುದು ನನ್ನ ವಿಶ್ವಾಸ ಎಂದು ಹೇಳಿದರು.

Exit mobile version