Site icon PowerTV

ಭೀಕರ ಚಳಿಗೆ ಸಿಲುಕಿ ನಾಲ್ವರು ಭಾರತೀಯರ ಸಾವು

ಮ್ಯಾನಿಟೋಬಾ (ಅಮೆರಿಕ): ಜನವರಿ 19 ರಂದು ಕೆನಡಾ-ಅಮೆರಿಕ ಗಡಿಯ ಬಳಿಯ ಮ್ಯಾನಿಟೋಬಾದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಶಿಶು ಸೇರಿದಂತೆ ನಾಲ್ವರು ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದ್ದು, ಅವರೆಲ್ಲರೂ ಭಾರತೀಯರು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಇಲ್ಲಿನ ಭಾರತದ ಹೈಕಮಿಷನ್ ತಿಳಿಸಿದೆ.

ಮೃತರನ್ನು ಜಗದೀಶ್ ಬಲದೇವ್‌ಭಾಯ್ ಪಟೇಲ್ (39), ವೈಶಾಲಿಬೆನ್ ಜಗದೀಶ್‌ಕುಮಾರ್ ಪಟೇಲ್ (37), ವಿಹಂಗಿ ಜಗದೀಶ್‌ಕುಮಾರ್ ಪಟೇಲ್ (11), ಧಾರ್ಮಿಕ್ ಜಗದೀಶ್‌ಕುಮಾರ್ ಪಟೇಲ್ (3) ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ. ಮ್ಯಾನಿಟೋಬಾದ ಬಳಿ ತೀವ್ರ ಚಳಿಯಿಂದ ಹೆ‍ಪ್ಪುಗಟ್ಟಿ ಮೃತಪಟ್ಟ ಶಿಶು ಸೇರಿದಂತೆ ನಾಲ್ಕು ಶವಗಳು ಪತ್ತೆಯಾಗಿದ್ದವು. ಇದೀಗ, ಕೆನಡಾದ ಅಧಿಕಾರಿಗಳು ನಾಲ್ವರ ಗುರುತುಗಳನ್ನು ದೃಢಪಡಿಸಿದ್ದಾರೆ.

Exit mobile version