Site icon PowerTV

ಕತಾರ್ ಫುಟ್​ಬಾಲ್ ವಿಶ್ವಕಪ್; ಬ್ರೆಜಿಲ್ ಈಕ್ವೆಡಾರ್ 1-1 ಡ್ರಾ

ರಿಯೊ ಡಿ ಜನೈರೊ (ಬ್ರೆಜಿಲ್) : ಕತಾರ್ ವರ್ಲ್ಡ್ ಕಪ್​ನಲ್ಲಿ ಬ್ರೆಜಿಲ್ ಮತ್ತು ಈಕ್ವೆಡಾರ್ ತಂಡಗಳು ಪಂದ್ಯದ ಕೊನೆಯಲ್ಲಿ 1-1 ಸಮಬಲ ಸಾಧಿಸಿ ಪಂದ್ಯ ಡ್ರಾ ಮಾಡಕೊಂಡಿವೆ. ಪಂದ್ಯ ಮುಗಿದಾಗ ಈಕ್ವೆಡಾರ್ 1-0ಯಿಂದ ಮುಂದಿತ್ತು. ಆದರೆ ಸ್ಟಾಪೇಜ್ ಟೈಂನ ಅವಧಿಯ ಆಟದಲ್ಲಿ ಬ್ರೆಜಿಲ್ ಪೆನಾಲ್ಟಿಯ ಮೂಲಕ ಒಂದು ಗೋಲನ್ನು ಹೊಡೆದು ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಆಟದ ಕೊನೆಯವರೆಗೂ ಈಕ್ವೆಡಾರ್ ಗೆಲುವಿನ ಕುದುರೆಯ ಮೇಲಿದ್ದರೂ ಕೊನೆಯಲ್ಲಿ ಮಾತ್ರ ಎಡವಿ ಪಂದ್ಯ ಡ್ರಾನಲ್ಲಿ ಅಂತ್ಯವಾಗುವಂತಾಯಿತು. ಪಂದ್ಯದ ಮೊದಲಾರ್ಧದಲ್ಲಿ ಮೂರು ಬಾರಿ ಕೆಂಪು ಕಾರ್ಡ್​ ಬಳಕೆ ಮಾಡಲಾಯಿತು. ಈಕ್ವೆಡಾರ್​ನ ಗೋಲ್​ಕೀಪರ್ ಅಲೆಕ್ಸಾಂಡರ್ ಡೊಮಿಂಗ್ಯೊಜ್​ರಿಗೆ ಎರಡು ಬಾರಿ ಹಾಗೂ ಬ್ರೆಜಿಲ್​ನ ರೈಟ್​ಬ್ಯಾಕ್ ಎಮಿರ್ಸನ್ ರಾಯಲ್​ಗೆ ಒಂದು ಬಾರಿ ತೋರಿಸಲಾಯಿತು. ನಂತರ ಅದನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ಅದರೆ ಇಡೀ ಪಂದ್ಯ ಗೊಂದಲದ ಮಧ್ಯೆಯೇ ನಡೆಯಿತು.

Exit mobile version