Site icon PowerTV

ಸೊಸೆಗಾಗಿ ಹಿರಿಯ ನಾಯಕ ಕಣದಿಂದ ಹಿಂದಕ್ಕೆ

ಗೋವಾ: ಗೋವಾದ ದೀರ್ಘಕಾಲದ ಸಿಎಂ ಹಾಗೂ ಬರೋಬ್ಬರಿ 11 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸದ್ಯ ಕಾಂಗ್ರೆಸ್ ಕೂಡ ಇದೇ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಬಿಜೆಪಿಯು ಇದೇ ಕ್ಷೇತ್ರದಿಂದ ಅವರ ಸೊಸೆ ದಿವ್ಯ ವಿಶ್ವಜಿತ್ ರಾಣೆ ಅವರಿಗೆ ಟಿಕೆಟ್ ನೀಡಿದ್ದು, ಇದರ ಬೆನ್ನಲ್ಲಿಯೇ ಹಿರಿಯ ನಾಯಕ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.

ಗೋವಾದಲ್ಲಿ ಮತದಾನ ನಡೆಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಬಿಜೆಪಿಯು ತಂತ್ರ ರೂಪಿಸಿ, ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದೆ. ಹೀಗಾಗಿ ಮುಜುಗರದಿಂದಾಗಿ ಹಿಂದೆ ಸರಿದಿದ್ದಾರೆ. ಇದು ಕಾಂಗ್ರೆಸ್ ಗೂ ಹಿನ್ನಡೆಯಾಗುವಂತೆ ಮಾಡಿದೆ.

Exit mobile version