Site icon PowerTV

ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಕೊಳೆತ ಮಾವು, ಮೋದಿ ಫ್ರೆಶ್ ಆ್ಯಪಲ್ ಎಂದಿದ್ದ ಸಚಿವ ಈಶ್ವರಪ್ಪ ಅವರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಹಾಗಾದ್ರೆ ಯಡಿಯೂರಪ್ಪರನ್ನ ಬದಲಾಯಿಸಿದ್ದು ಏಕೆ..? ಯಡಿಯೂರಪ್ಪ ಕೊಳೆತ ಹಣ್ಣು ಅಂತಾನೆ ಬದಲಾಯಿಸಿದ್ರಾ..? ಈಗ ಬೊಮ್ಮಾಯಿ ಸಹ ಕೊಳೆತ ಹಣ್ಣು ಅಂತ ಬದಲಾಯಿಸುತ್ತಾರಾ.. ‘? ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಂದಿದೆ ಹಾಗಾದರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಕೊಳೆತಿದ್ಯಾ..? ನಾನು ಬರೆದ ಪತ್ರಕ್ಕೆ ಕಿಮ್ಮತ್ತಿಲ್ಲ ಅಂತ ರೇಣುಕಾಚಾರ್ಯ ಹೇಳಿದ್ದಾರೆ.
ಹಾಗಾದರೆ ಬಿಜೆಪಿ ಆಡಳಿತ ಸರಿಯಿಲ್ಲ ಅಂತ ಒಪ್ಪಿಕೊಂಡಂತೆ ಅಲ್ವಾ..? ನಾವು ಕೊಳೆತ ಹಣ್ಣು ಅಲ್ಲ ಎವರ್ ಗ್ರೀನ್ ಎವರ್ ಫ್ರೆಶ್ ಎಂದು ಕಲಬುರಗಿಯಲ್ಲಿ ಈಶ್ವರಪ್ಪ ಹೇಳಿಕೆಗೆ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

Exit mobile version