Site icon PowerTV

ದನಗಳ ಜಾತ್ರೆಯಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್

ಮಂಡ್ಯ:ದನಗಳ ಜಾತ್ರೆಯಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿದ ಘಟನೆ ಕೆ.ಆರ್​ ಪೇಟೆ ತಾ. ಹೇಮಗಿರಿಯಲ್ಲಿ ನಡೆದಿದೆ.

ದನಗಳ ಜಾತ್ರೆಗೆಂದು ಬಂದಿದ್ದ ನೂರಾರು ರೈತರ ಮೇಲೆ ಲಾಠಿ ಚಾರ್ಜ್‌ ಮಾಡಿದ್ದು.ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ದನಗಳನ್ನು ತಂದಿದ್ದರು ಆದರೆ ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಹಿನ್ನೆಲೆ 144 ಸೆಕ್ಷನ್ ಜಾರಿ ಮಾಡಿದ್ದು,ಕೊರೋನಾದಿಂದ 2 ವರ್ಷಗಳಿಂದ ದನಗಳ ಜಾತ್ರೆ ಮಾಡಿಲ್ಲ.ಹೀಗಾಗಿ ಜಾತ್ರೆ ಮಾಡೋದಕ್ಕೆ ಅನುಮತಿ ಕೊಡ್ಬೇಕು ಎಂದಿದ್ದ ರೈತರು ಯಾವುದೇ ಕಾರಣಕ್ಕೂ ಜಾತ್ರೆ ಮಾಡಲು ಬಿಡಲ್ಲ ಎಂದು ಪೊಲೀಸರು ಹೇಳಿದ್ದಾರೆ.

ರಾಜಕಾರಣಿಗಳ ಸಮಾವೇಶ, ಸಭೆಗಳು ಮಾಡಲು ಅನುಮತಿ ಕೊಡ್ತೀರಾ..? ರೈತರು ಎಂದರೆ ಮಾತ್ರ ನಿಮ್ಮ ನಿಮಯಗಳು ಜಾರಿಗೆ ಬರುತ್ತವೆ.ನಮಗೆ ಯಾಕೆ ಬಿಡಲ್ಲ ಎಂದು ಪೊಲೀಸರ ಜೊತೆ ರೈತರ ವಾಗ್ದಾಳಿ ಈ ವೇಳೆ ಜಾತ್ರೆಗೆ ಬ್ರೇಕ್‌ ಹಾಕಲು ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

Exit mobile version