Site icon PowerTV

ನಾನು ತಲೆ ಕೆರೆದುಕೊಂಡು ಯಾರ ಹತ್ರಾನೂ ಹೋಗಲ್ಲ – ಹೆಚ್​.ಡಿ ರೇವಣ್ಣ

ಹಾಸನ: ಕೆಲವರು ಜೆಡಿಎಸ್ ಪಕ್ಷವನ್ನು ಕುಟುಂಬ ಪಕ್ಷ ಎನ್ನುತ್ತಾರೆ ಹಾಗಾದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೆಲ್ಲಾ ಯಾರು? ಯಡಿಯೂರಪ್ಪ ಮತ್ತು ಮಕ್ಕಳು ಅವರೆಲ್ಲಾ ಯಾರು? ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಪ್ರಶ್ನೆ ಮಾಡಿದ್ದಾರೆ.

ಹಾಸನದಲ್ಲಿಂದು ಸುದ್ದಿಗೋಷ್ಠಿಯನ್ನು ಜೆಡಿಎಸ್​ ಶಾಸಕ ಹೆಚ್.ಡಿ ರೇವಣ್ಣ ಅವರು ಮಾತನಾಡಿದರು. ಇದೇ ವೇಳೆ ರೇವಣ್ಣ ಕೇಳಿದ ಕೆಲಸವನ್ನೆಲ್ಲಾ ಮಾಡೋಕಾಗುತ್ತಾ? ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ತಲೆ ಕೆರೆದುಕೊಂಡು ಯಾರ ಹತ್ರಾನೂ ಹೋಗಲ್ಲ. ಇಂತಹವರಿಗೆಲ್ಲಾ ನಾನು ರಿಯಾಕ್ಟ್ ಮಾಡೊಲ್ಲ ಎಂದು ಗರಂ ಆದರು.
ಇನ್ನು ನಾನು ಅನುಭವದಲ್ಲಿ ಇಂತಹವರನ್ನ ಎಷ್ಟೋ ಜನರನ್ನ ನೋಡಿದ್ದೇನೆ. ನಾನು ನನ್ನ ಮನೆಗೆ ಕೆಲಸ ಮಾಡಿಕೊಳ್ಳೋಕೆ ಹೋಗಿಲ್ಲ. ಬಡವರ ಮಕ್ಕಳಿಗಾಗಿ ಕೋರ್ಸ್ ಕೇಳೋದಕ್ಕೆ ಹೋಗಿದ್ದೆ. ಮುಖ್ಯಮಂತ್ರಿ ಕೆಲಸ ಮಾಡೋದಾಗಿ ಭರವಸೆ ನೀಡಿದರು. ಆದರೆ, ಇಲ್ಲಿಯವರೆಗೂ ಯಾವುದೇ ಕರೆ ಮಾಡಿಲ್ಲ. ಸಮಯ ಬಂದಾಗ ಎಲ್ಲವನ್ನೂ ಮಾಡಿಕೊಳ್ಳುತ್ತೇನೆ ಎಂದರು.

ಸದ್ಯ ಯಡಿಯೂರಪ್ಪನವರೇ ಅಧಿಕಾರದಿಂದ ಇಳಿಯುವಾಗ ಹೇಳಿದ್ದಾರೆ. ದೇವೇಗೌಡರ ಕುಟುಂಬ ಯಾವೊಂದು ಕೆಲಸವನ್ನು ಮಾಡಿಲ್ಲ. ಕೇವಲ ದುಡ್ಡು ಹೊಡೆಯೋ ಕೆಲಸ ಮಾತ್ರ ಮಾಡಿದ್ದು ಎಂದಿದ್ದರು ಅದಕ್ಕೆ ಅವರ ವಿರುದ್ಧ ಸೇಡು ತೀರಿಸಿಕೊಂಡೆ ಅಂತ ಹೇಳಿಲ್ವಾ? ಎಂದು ರೇವಣ್ಣ ಲೇವಡಿ ಮಾಡಿದರು.

Exit mobile version