Site icon PowerTV

ಎಲ್ಲರಿಗೂ ಚಟ ಆಗಿದೆ : ಸಚಿವ ಎಸ್ ಟಿ ಸೋಮಶೇಖರ್

ಮೈಸೂರು :ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್,ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.

ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತಿನಿ ಬಿಡ್ತಿನಿ ಅಂತಾರೆ ಆದರೆ ಹಾವಿನ ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು ಅದು ಬೂಸ್ ಅನ್ನತಾ ಅಥವಾ ಟುಸ್ ಅನ್ನುತ್ತಾ ಅಂತಾ. ಸುಮ್ಮನೆ ವಿಪಕ್ಷದ ನಾಯಕರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ. ಇತ್ತೀಚಿಗೆ ಇದು ಎಲ್ಲರಿಗೂ ಚಟ ಆಗಿದೆ. ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅವರ ಕ್ರಾಂಗೆಸ್​ ಬರುತ್ತಾರೆ ಎನ್ನುತಾರಲ್ಲ ಲಿಸ್ಟ್​​ ಇರುವುದಾದರೆ ಬಹಿರಂಗ ಪಡಿಸಲಿ ಎಂದು ಕಿಡಿಕಾರಿದ್ದಾರೆ. ಮತ್ತು ತಮ್ಮದೇ ಪಕ್ಷದ ರಮೇಶ್ ಜಾರಕಿಹೋಳಿ ಸಹ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಸೋಮಶೇಖರ್ ಟಾಂಗ್ ನೀಡಿದ್ದಾರೆ ಹಾಗೂ ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್​​​ನವರಿಗೆ ಮಾಡಲು ಬೇರೆ ಕೆಲಸ ಇಲ್ಲ ಬೆಳಗ್ಗೆ ಎದ್ದರೆ ಕೆಸರೇರಾಚಾಡೋದು ಅವರ ಕೆಲಸ ಆಗಿದೆ.ನಮಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಕೆಲಸ ಇಲ್ಲದೆ ಅವರು ಏನೇನೋ ಮಾತಾಡುತ್ತಾರೆ. ಆದರೆ ನಮಗೆ ಮತ್ತು ನಮ್ಮ ಪಕ್ಷದವರಿಗೆ ರಾಜ್ಯದ ಅಭಿವೃದ್ಧಿ ಮಾಡುವ ಕೆಲಸ ಇದೆ. ಸಿ ಎಂ ಬೊಮ್ಮಾಯಿ ಅವರು ಅವರ ಆಡಳಿತ ಅತ್ಯತ್ತಮವಾಗಿ ನಡೆಸುತ್ತಿದ್ದಾರೆ. ಕೆಲಸ ಇಲ್ಲದ ಕಾಂಗ್ರೆಸ್​​​ನವರು ಸುಮ್ಮನ್ನೆ ಮಾತಾಡುತ್ತಿದ್ದಾರೆಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ

Exit mobile version