Site icon PowerTV

ಕಾಂಗ್ರೆಸ್‌ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಯಾವೆಲ್ಲಾ ಶಾಸಕರು ಬರ್ತಾರೆ ಅಂತ ಪಟ್ಟಿ ಮಾಡ್ತಿದ್ದಾರೆ ಬಿಜೆಪಿ, ಜೆಡಿಎಸ್‌ನ ಶಾಸಕರು ಬರ್ತಾರೆ ಅಂತ ಕೈ ನಾಯಕರು ಹೇಳ್ತಾ ಇದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತುಮಕೂರಿನಿಂದ ಜೆಡಿಎಸ್‌ ಹೊಡೆದೋಡಿಸಿ ಎಂದಿದ್ದಾರೆ.ದೊಡ್ಡ ದಂಡೇ ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ ಅಂತಾರೆ ಎಲ್ಲರೂ ನಮ್ಮ ಸಂಪರ್ಕದಲ್ಲಿ ಮೂರು ವರ್ಷದಿಂದ ಇದ್ದಾರೆ ಪಕ್ಷಾಂತರದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಮುಗಿಸಲು ಏನು ಮಾಡಿದರು ಅನ್ನೋದು ಗೊತ್ತಿದೆ. ಅದಕ್ಕೆ ಟ್ವೀಟ್‌ನಲ್ಲಿ ಸುಳ್ಳುರಾಮಯ್ಯ ಅಂದಿದ್ದು 2008ರ ಚುನಾವಣೆಯಲ್ಲಿ ಏನೆಲ್ಲಾ ಮಾಡಿದರು ಕಾಂಗ್ರೆಸ್ ಮುಖಂಡರನ್ನು ಮುಗಿಸಲು ಏನು ಮಾಡಿದ್ರಿ..? ಎಷ್ಟು ದುಡ್ಡು ತಂದಿದ್ದೀರಾ..? ಸತ್ಯ ಹೇಳಿ‌ ಜನರ ಮುಂದೆ ಅರ್ಕಾವತಿ ಕರ್ಮಕಾಂಡ ಇಂದಿನ ಭ್ರಷ್ಟಾಚಾರಕ್ಕೆ ಸರಿಸಮಾನವಲ್ಲ ಅವರನ್ನು ನೋಡಿದರೆ ಭಯವಂತೆ ಅಂತ ಹೇಳಿದ್ದಾರೆ.ನಾವು ಜನರಿಗೆ ಗೌರವ ಕೊಡುತ್ತೇವೆ, ಇಂಥ ನಾಯಕರಿಗೆ ಭಯಪಡಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

Exit mobile version