Site icon PowerTV

2023ರವರೆಗೆ ಬೊಮ್ಮಾಯಿಯೇ ಸಿಎಂ : ಸಚಿವ ಹಾಲಪ್ಪ

ಕೊಪ್ಪಳ : ವಲಸಿಗರು ವಾಪಾಸ್​ ಕಾಂಗ್ರೆಸ್​ ಪಕ್ಷಕ್ಕೆ ಹೋಗ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕುರಿತು ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್ ಅವರು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಪಕ್ಷದ ಶಾಸಕರು ಪಕ್ಷದಿಂದ ಹೊರಬರಲ್ಲ. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಶಾಸಕರು ಹೊರಬಂದರು. ಮಾಜಿ ಸಿಎಂ ಸಿದ್ದರಾಮಯ್ಯ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತೇ ಇಲ್ಲ. 2023 ರವರೆಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿರ್ತಾರೆ.

ರಾಜ್ಯದ ಯಾವ ಜಿಲ್ಲೆಗೆ ಉಸ್ತುವಾರಿ ನೀಡಿದ್ರೂ, ಹೋಗಿ ಕೆಲಸ ಮಾಡ್ತೇವೆ. ಅಲ್ಲಿನ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುತ್ತೀವಿ ಎಂದರು. ಆನಂದ್ ಸಿಂಗ್​​ಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಿಕೆಗೆ ಅಭಿಮಾನಿಗಳ ಪಟ್ಟು ಕುರಿತು ಇದು ಎಲ್ಲೆಡೆ ಸಾಮಾನ್ಯ, ಅಭಿಮಾನಿಗಳು ಕೇಳ್ತಾರೆ ಅದರಲ್ಲೇನು ತಪ್ಪು ಎಂದು ಕನಕಗಿರಿಯ ಮುಸಲಾಪುರದಲ್ಲಿ ಸಚಿವ ಹಾಲಪ್ಪ ಆಚಾರ್​ ಅವರು ವಿಪಕ್ಷ ನಾಯಕದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Exit mobile version