Site icon PowerTV

ನಮ್ಮಅಪ್ಪನಾಣೆ ಮೇಕೆದಾಟು ಯೋಜನೆ ನಾವೇ ಮಾಡೋದು : ವಿ.ಸೋಮಣ್ಣ

ಮೈಸೂರು : ದೇವರಾಣೆ, ನಮ್ಮ ಅಪ್ಪನಾಣೆ ಹೇಳುತ್ತಿದ್ದೇನೆ, ಮೇಕೆದಾಟು ಯೋಜನೆಯನ್ನು ಮಾಡುವುದು ನಾವೇ ಎಂದು ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ನಾವೇ ಮಾಡೋದು. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸುಭದ್ರ ಸರ್ಕಾರಗಳಿವೆ. ರಾಜ್ಯ ಸರ್ಕಾರದಲ್ಲಿ ಯಾವ ಅಭದ್ರತೆಯೂ ಇಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಅದರ ಬಗ್ಗೆ ಯಾರಿಗೂ ಯೋಚನೆ ಬೇಡ. ಕೆಲವು ಶಾಸಕರು ವೈಯಕ್ತಿಕವಾಗಿ ಕೂತು ಮಾತನಾಡುವುದಕ್ಕೂ ಬೇರೆ ಬೇರೆ ಅರ್ಥ ಕಲ್ಪಿಸಬೇಡಿ ಎಂದಿದ್ದಾರೆ.

ಕೆಲವರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕೂತು ಮಾತ್ನಾಡುವ ಅಭ್ಯಾಸವಿರುತ್ತದೆ.ಅದು ಅವರ ವೈಯಕ್ತಿಕ ವಿಚಾರ. ನನಗೆ ಅಂತ ಯಾವ ಅಭ್ಯಾಸಗಳು, ಅಥವಾ ಅದಕ್ಕೆ ಅಂತಾ ಟ್ರೈನಿಂಗ್ ಏನೂ ತೆಗೆದುಕೊಂಡಿಲ್ಲ ಎಂದು ಮೈಸೂರಿನಲ್ಲಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

Exit mobile version