Site icon PowerTV

ದಾರಿಬದಿಯಲ್ಲಿ ದೋಸೆ ಹಾಕಿದ ಶಾಸಕ

ಕಡೂರು: ಮಾಡಲು ಕೆಲಸವಿಲ್ಲದ ಬಡಗಿ ಅದೇನೊ ಕೆತ್ತಿದ್ನಂತೆ ಎಂಬ ಗಾದೆಯಂತೆ  ನಮ್ಮ ಮಾನ್ಯ ಶಾಸಕರ ಕಾಲಾಹರಣದ ವಿಡಿಯೊವೊಂದು ವೈರಲ್ ಆಗಿದೆ. ಕಡೂರು ತಾಲೂಕಿನ ಜನ ಸಾವಿರ ಸಾವಿರ ಸಮಸ್ಯೆಗಳಿಂದ ನರಳುತ್ತಿದ್ದರೆ, ಇಲ್ಲಿನ ಶಾಸಕರು ರಸ್ತೆ ಬದಿಯಲ್ಲಿ ದೋಸೆ ಹಾಕುತ್ತ ಕಾಲಾಹರಣ ಮಾಡಿದ ಘಟನೆಯೊಂದು ವರದಿಯಾಗಿದೆ. ಒಂದು ಸಣ್ಣ ಕಛೇರಿಯಲ್ಲಿ ಬರಿ ಒಂದು ವಿಭಾಗದ ಕಡತಗಳನ್ನು ವಿಲೇವಾರಿ ಮಾಡಲು ನೌಕರನಿಗೆ ಎಂಟು ಗಂಟೆ ಸಾಲುವುದಿಲ್ಲ. ಅಂಥದ್ದರಲ್ಲಿ ಇಡೀ ತನ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಶಾಸಕನೊಬ್ಬ ಸ್ಪಂದಿಸಬೇಕಿದ್ದರೆ 24 ಗಂಟೆಯೂ ಸಾಲುವುದಿಲ್ಲ.

ಹೀಗಿರುವಾಗ ಶಾಸಕರು ದಾರಿಬದಿಯಲ್ಲಿ ಕಾರು ನಿಲ್ಲಿಸಿ ದಾರಿಬದಿಯ ಹೋಟೆಲ್ ಒಂದರಲ್ಲಿ ದೋಸೆ ಹಾಕುತ್ತ ಕಾಲಾಹರಣ ಮಾಡಿದ್ದಾರೆ! ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಇಂಥ ಮಹಾನ್ ಸಾಧನೆ ಮಾಡಿದ ಶಾಸಕರು. ಕಡೂರು ಬೀರೂರು ಮಧ್ಯದ ರಸಂ ಹೋಟೆಲ್​ನಲ್ಲಿ ಮೂರು ದೋಸೆ ಹಾಕಿದ ಶಾಸಕ ಬೆಳ್ಳಿ ಪ್ರಕಾಶ್ ತಮಗೂ ದೋಸೆ ಹಾಕಲು ಬರುತ್ತದೆ ಎಂದು ತೋರಿಸಿದರಂತೆ. ಚೀಪ್ ಗಿಮಿಕ್​ಗಳ ಮೂಲಕ ಜನರನ್ನು ಸೆಳೆಯುವ ಇಂಥ ತಂತ್ರಕ್ಕೆ ಮೊರೆಹೋದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಈ ಬಿಜೆಪಿ ಶಾಸಕರಿಗೆ ತಮ್ಮ ಪಕ್ಷದ ಚಾಯ್​ವಾಲ ಪ್ರೇರಣೆಯಾಗಿರಬಹುದೆ?

Exit mobile version