Site icon PowerTV

ರಮೇಶ್ ಜಾರಕಿಹೊಳಿ ಪರ MTB ಬ್ಯಾಟಿಂಗ್

ಹೊಸಕೋಟೆ (ಬೆಂಗಳೂರು): ಪಲ್ಲಂಗ ಪ್ರಕರಣದಿಂದಾಗಿ ಮಂತ್ರಿಗಿರಿ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿಗೆ ಮತ್ತೆ ಮಂತ್ರಿ ಸ್ಥಾನ ಕೊಡಿ ಎಂದು MTB ನಾಗರಾಜ್ ಮನವಿ ಮಾಡಿದ್ದಾರೆ. ಜಾರಕಿಹೊಳಿ ರಾಜೀನಾಮೆ ನೀಡುವ ಕಾರಣ ಇಡೀ ಕರ್ನಾಟಕಕ್ಕೆ ಗೊತ್ತಿದ್ದರೂ, ಎಂಟಿಬಿ ಮಾತ್ರ ‘ಕಾರಣಾಂತರಗಳಿಂದ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದಾರೆ’ ಎಂದು ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

15 ಜನ ಕಾಂಗ್ರೆಸಿಗೆ ಕೈಕೊಟ್ಟು ಬಂದ ನಮ್ಮ ಜೊತೆಯೇ ಅವರೂ ಇದ್ದಾರೆ, ಅದಕ್ಕೆ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಯಾವುದೇ ನಾಚಿಕೆಯಿಲ್ಲದೆ ಹೇಳಿದ್ದಾರೆ. ಹೀಗೆ ಹೇಳುತ್ತಲೇ ತಮ್ಮ ಮಾತಿಗೆ ಎಲ್ಲಿ ಹೈಕಮಾಂಡ್ ಕೋಪಮಾಡಿಕೊಳ್ಳುತ್ತದೆಯೋ ಎಂದು ಹೆದರಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ನಾವು ಬದ್ಧ ಎಂದು ತಿಪ್ಪೆ ಕೂಡ ಸಾರಿಸಿದ್ದಾರೆ! ಹೊಸಕೋಟೆಯಲ್ಲಿ ಈ ರೀತಿಯ ಹೇಳಿಕೆ ನೀಡಿರುವ ಎಂಟಿಬಿ ಜನರಿಗೆ ತಾವು ಕಾಂಗ್ರೆಸಿನಿಂದ ಓಡಿ ಬಂದು ಸರ್ಕಾರ ಬೀಳಲು ಕಾರಣವಾದ ಶಾಸಕರು ಎಂಬುದನ್ನು ಪರೋಕ್ಷವಾಗಿ ನೆನಪಿಸಿದ್ದಾರೆ!

Exit mobile version