Site icon PowerTV

ನಾನು ಸರ್ವಜ್ಞ ಅಲ್ಲ : ಎಸ್ ಟಿ ಸೋಮಶೇಖರ್

ಬೆಂಗಳೂರು : ಸಚಿವರ ಮೌಲ್ಯ ಮಾಪನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್​​ ಸಹಕಾರ ಇಲಾಖೆಯನ್ನು ನಾನು ತೆಗೆದುಕೊಂಡು ಎರಡು ವರ್ಷ ಆಗಿದೆ.

ನಾನು ಸರ್ವಜ್ಞ ಅಲ್ಲ, ಆದ್ರೆ ಅಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಸಹಕಾರ ಇಲಾಖೆ ಕೂಡ ರಾಜ್ಯದಲ್ಲಿ ಇದೆ ಅಂತ ಜನರಿಗೆ ಗೊತ್ತಾಗಬೇಕು. ಜನರಿಗೂ ಕೂಡ ಇಲಾಖೆ ಇದೆ ಅಂತ ತೊರಿಸುವ ಕೆಲಸ ಮಾಡಿದ್ದೇನೆ. ನಾನು ಕೂಡ ಸಹಕಾರ ಸಂಘದ ಅಧ್ಯಕ್ಷನಾಗಿದ್ದೇನೆ.ಅದರ ಹೊರತಾಗಿ ಪಕ್ಷಪಾತ ಇಲ್ಲದೆ ಇಲಾಖೆ ನಿರ್ವಹಣೆ ಮಾಡಿದ್ದೇನೆ.

ಎರಡು ಸಿ ಓ ಡಿ ಕೇಸ್​​ಗಳು ನನ್ನ ಮೇಲೆ ಇತ್ತು. ಅದರ ಹೊರತಾಗಿ ಪಕ್ಷಪಾತ ಇಲ್ಲದೆ ಇಲಾಖೆ ನಿರ್ವಹಣೆ ಮಾಡಿದ್ದೇನೆ. ರಾಜಕೀಯ ದ್ವೇಷ ವೈಯಕ್ತಿಕವಾಗಿ ಆಗಬಾರದು ಎಂದು ಎಸ್.ಟಿ ಸೋಮಶೇಖರ್​​ ಹೇಳಿದ್ರು.

ಇನ್ನು ಇದೇ  ವೇಳೆ ಬಿಜೆಪಿಯಿಂದ ಕಾಂಗ್ರೆಸ್​​ಗೆ ಅನೇಕರು ಬರ್ತಾರೆ ಅನ್ನೊ ಡಿಕೆ ಶಿವಕುಮಾರ್​​ ಅವರ ಹೇಳಿಕೆ  ವಿಚಾರವಾಗಿ ಪ್ರತಿಕ್ರಿಯಿಸಿರುವ ನಾನು ಪಕ್ಷಕ್ಕೆ ಸರ್ಕಾರಕ್ಕೆ ಮೋಸ ಮಾಡಲ್ಲ, ನಾನು ತೃಪ್ತಿಯಾಗಿ ಕೆಲಸ ಮಾಡ್ತಾ ಇದ್ದೇನೆ.  ಪಕ್ಷವು ನನ್ನನ್ನು ಸ್ವತಂತ್ರನಾಗಿ ಬಿಟ್ಟಿದ್ದಾರೆ ನಾನು ಇಲ್ಲಿಯೇ ಮುಂದುವರೆಯುತ್ತೇನೆಂದು ಹೇಳಿಕೆ ನೀಡಿದ್ದಾರೆ

Exit mobile version