Site icon PowerTV

ಸಂಪುಟ ವಿಸ್ತರಣೆ ಸಿಎಂ ಬೊಮ್ಮಾಯಿ ಅವರದ್ದೇ ಪರಮಾಧಿಕಾರ : ಸಚಿವ ಕಾರಜೋಳ

ಬೆಂಗಳೂರು : ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಯಾವಾಗ, ಏನು ಮಾಡಬೇಕು ಎನ್ನುವುದು ಸಿಎಂ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟದ್ದಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಇಂದು ಸಚಿವ ಕಾರಜೋಳ ಭೇಟಿ ನೀಡಿ ಮುಖ್ಯಮಂತ್ರಿಗಳ ಜತೆ ಅಂತಾರಾಜ್ಯ ಜಲವ್ಯಾಜ್ಯಗಳ ಕುರಿತು ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಯಾವಾಗ ವಿಸ್ತರಣೆ, ಪುನಾರಚನೆ ಮಾಡಬೇಕು ಎಂದು ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.

ಇನ್ನು ಸುಪ್ರೀಂಕೋರ್ಟ್​​​ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳ ಪೀಠ ಬದಲಾಗಿದೆ. ಇದೇ 25 ಕ್ಕೆ ಮೇಕೆದಾಟು ವಿಚಾರಣೆ ಇದೆ ಎಂದು ತಿಳಿಸಿದರು.

Exit mobile version