Site icon PowerTV

ವೀಕೆಂಡ್‌ ಲಾಕ್‌ಡೌನ್‌ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ – ವಾಟಾಳ್

ಬೆಂಗಳೂರು: ವೀಕೆಂಡ್‌ ಲಾಕ್‌ಡೌನ್‌ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ ಅಂತ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ..
ಈ ರೀತಿಯ ಕ್ರಮಗಳಿಂದಾಗಿ ಬಡವರಿಗೆ ಬಹಳ ತೊಂದರೆಯಾಗುತ್ತಿದೆ.. ಚಾಮರಾಜನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೀಕೆಂಡ್‌ ಬೇಡವೇ ಬೇಡ ಎಂದು ಮೊದಲು ಹೇಳಿದವನೇ ನಾನು ಎಂದು ಹೇಳಿದ್ರು.. ಇನ್ನು, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬೊಮ್ಮಾಯಿ ಬಿಟ್ಟರೆ ಬಿಜೆಪಿ ಪಕ್ಷದಲ್ಲಿ ಅಂತಹ ನಾಯಕರು ಯಾರಿದ್ದಾರೆ..? 6 ತಿಂಗಳಿಗೊಮ್ಮೆ ಸಿಎಂ ಬದಲಾವಣೆ ಮಕ್ಕಳ ಆಟವಲ್ಲ ಎಂದು ಹೇಳಿದ್ರು.

Exit mobile version