Site icon PowerTV

ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಯಾರಿಗೆ ?

ಮೈಸೂರು: ಎಲ್ಲಾ ಅಂಗಡಿಗಳು ತೆರೆದು ಜನ ಬರಬಾರದು ಅಂತಾರೆ.ಯಾರಾದರೂ ಹುಚ್ಚ ಈ ರೀತಿ ಆದೇಶ ಕೊಡುತ್ತಾರಾ ಎಂದು ಮೈಸೂರಿನಲ್ಲಿ ಎಂ.ಎಲ್.ಸಿ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಜನರು ಮಾತ್ರ ಆಚೆ ಬರಬಾರದು ಅಂದರೆ ಹೇಗೆ ? ನನಗೆ ಏನು ಅರ್ಥ ಆಗುತ್ತಾ ಇಲ್ಲ.‘ನಿಮಗೆ ಹೇಳುವವರು ಕೇಳುವವರು ಇಲ್ಲವಾ ?ಜನರನ್ನು ಗಾಬರಿ ಮಾಡಬೇಡಿ. ಮೂರನೇ ಅಲೆ ಮೊದಲ ರೀತಿ ಇಲ್ಲ. ಕೋವಿಡ್ ಹೆಸರಲ್ಲಿ ಕೆಲವರು ದುಡ್ಡು ಮಾಡಿದ್ದು ಸಾಕು.ಕೋವಿಡ್ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ. ವೈದ್ಯರು ಸಾಲ ಮಾಡಿದ್ದನ್ನು ಎಲ್ಲವನ್ನೂ ತೀರಿಸಿಕೊಂಡಿದ್ದಾರೆ.ಖಾಸಗಿ ಆಸ್ಪತ್ರೆ ಉಳ್ಳವರಿಗೆ ಅನುಕೂಲ ಮಾಡಲು ಸರ್ಕಾರ ಹೊರಟಿದೆ.ಮಂತ್ರಿ ತಜ್ಞರು, ಡಾ.ಸುಧಾಕರ್ ಹಲ್ಲಿನ ವೈದ್ಯರು.ಜನರಿಗಿಂತ ತಜ್ಞರು ಯಾರು ಇಲ್ಲ.ಸರ್ಕಾರ ಕೆಲವು ನಿಬಂಧನೆಗಳನ್ನು ಹಾಕಲಿ.ಆದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ನೈಟ್ ಕರ್ಪ್ಯೂ ಬೇಡ.ಆಯಾ ಜಿಲ್ಲೆಯ ಪರಿಸ್ಥಿತಿಗೆ ತಕ್ಕಂತೆ ಡಿಸಿಗೆ ನಿರ್ಧಾರ ಮಾಡಲು ಬಿಡಿ ಎಂದು ಎಂ.ಎಲ್.ಸಿ ಎಚ್ ವಿಶ್ವನಾಥ್ ಸಲಹೆಯನ್ನು ನೀಡಿದ್ದಾರೆ.

Exit mobile version