Site icon PowerTV

ಗಡಿಯಲ್ಲಿ ಶಾಂತಿ ಕದಡಲು ಶಿವಸೇನೆ ಹುನ್ನಾರ

ಬೆಳಗಾವಿ : ಪುಂಡಾಟಕ್ಕೆ ಮುಂದಾದ ಕೊಲ್ಲಾಪುರ ಶಿವಸೇನೆ ಪುಂಡರು ನಾಡದ್ರೋಹಿ ಎಂಇಎಸ ಪುಂಡರ ವಿರುದ್ಧ ದೇಶದ್ರೋಹ ಕೇಸ್ ವಾಪಸಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ನಾಳೆ ಬೆಳಗಾವಿಗೆ ನುಗ್ತೀವಿ ಎಂದು ಕೊಲ್ಲಾಪುರದ ಶಿವಸೇನೆ ಮುಖಂಡ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ಹೇಳಿದ್ದಾರೆ.ನಾಳೆ ಕೊಲ್ಲಾಪುರದಿಂದ ಬೆಳಗಾವಿಗೆ ಶಿವಸೇನೆ ದಿಂಡಿ ಮಾರ್ಚ್ ಗೆ ನಿರ್ಧಾರ ಕೈಗೊಂಡಿದ್ದು.ಪಲ್ಲಕ್ಕಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇರಿಸಿ ಮೆರವಣಿಗೆಗೆ ಮಾಡಿ ಬಳಿಕ ಕರ್ನಾಟಕ ಮಹಾರಾಷ್ಟ್ರ ಗಡಿಯಾದ ಕಾಗಲ್ ಬಳಿ ಶಿವಾಜಿ ಮೂರ್ತಿಗೆ ಅಭಿಷೇಕ ಮಾಡಿ ಆ ಬಳಿಕ ಬೆಳಗಾವಿಗೆ ಪಲ್ಲಕ್ಕಿಯೊಂದಿಗೆ ನುಗ್ತೀವಿ ಕರ್ನಾಟಕದ ಪೊಲೀಸರು ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸಿದರು ನಾವು ಹಿಂದೆ ಸರಿಯಲ್ಲ ಶಿವಸೇನೆ ಸಾವಿರಾರು ಕಾರ್ಯಕರ್ತರೊಂದಿಗೆ ಕರ್ನಾಟಕ ನುಗ್ತೀವಿ ಎಂದು ಶಿವಸೇನೆ ಮುಖಂಡ ವಿಜಯ ದೇವಣೆ ಹೇಳಿದ್ದಾರೆ.

Exit mobile version