Site icon PowerTV

ಹೋಟೆಲ್‌ ಮಾಲೀಕರ ಆಕ್ರೋಶಕ್ಕೆ ಮಣಿದ ಸರ್ಕಾರ

ಬೆಂಗಳೂರು : ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ರದ್ದುಗೊಳಿಸಲಾಗಿದೆ. ನಾಳೆಯಿಂದಲೇ ವೀಕೆಂಡ್‌ ಕರ್ಫ್ಯೂ ಇರಲ್ಲ ಬೆಂಗಳೂರಿನಲ್ಲೂ ವೀಕೆಂಡ್‌ ಕರ್ಫ್ಯೂ ಇರಲ್ಲ ಶನಿವಾರ, ಭಾನುವಾರ ವೀಕೆಂಡ್‌ ಕರ್ಫ್ಯೂ ಇಲ್ಲ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಮಾಮೂಲಿ ಕರ್ಫ್ಯೂ ಇರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನೈಟ್‌ ಕರ್ಫ್ಯೂ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.ತಜ್ಞರೊಂದಿಗೆ ಸಮಾಲೋಚನೆ ಬಳಿಕ ಸರ್ಕಾರ ನಿರ್ಧಾರ ಕೈಗೊಂಡಿದೆ.ಸಭೆ ಬಳಿಕ ಕಂದಾಯ ಸಚಿವ ಆರ್‌.ಅಶೋಕ್‌ ಸ್ಪಷ್ಟನೆ ನೀಡಿದ್ದಾರೆ.ಸರ್ಕಾರದಿಂದ ಹೊರ ಬಿತ್ತು ಅಧಿಕೃತ ಘೋಷಣೆ.ಕೊವಿಡ್‌ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿದ್ದರೂ ಗಂಭೀರವಾಗಿಲ್ಲ.ಕೇವಲ ಶೇ.5ರಷ್ಟು ರೋಗಿಗಳು ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ.ಸೋಂಕು ಮತ್ತೆ ಉಲ್ಬಣವಾದರೆ ಕರ್ಫ್ಯೂ ಜಾರಿ ಮಾಡಲಾಯಿತು.

ಮದ್ಯಪ್ರಿಯರಿಗೂ ಗುಡ್ ನ್ಯೂಸ್..ಎಲ್ಲಾ ಬಾರ್‌ & ರೆಸ್ಟೋರೆಂಟ್‌ ಓಪನ್ ಹೋಟೆಲ್, ಬಾರ್‌ಗಳಲ್ಲಿ 50ಃ50 ರೂಲ್ಸ್‌ ಮುಂದುವರಿಕೆ ಮಾಡಲಾಗುತ್ತದೆ ಎಂದು ಆರ್ ಅಶೋಕ ತಿಳಿಸಿದ್ದಾರೆ.

Exit mobile version