Site icon PowerTV

ಮಕ್ಕಳಿಗೆ ಮಾಸ್ಕ್​​​ ಕಡ್ಡಾಯವಿಲ್ಲ

ರಾಜ್ಯ : ಮಕ್ಕಳಿಗೆ ಆ್ಯಂಟಿಬಾಡಿ ಔಷಧ ಬೇಡ, 5 ವರ್ಷದವರೆಗೆ ಮಾಸ್ಕ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್‌ ಮಾರ್ಗಸೂಚಿಯನ್ನು ಹೊರಡಿಸಿದೆ. 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಅಗತ್ಯವಿಲ್ಲ. 6ರಿಂದ 11 ವರ್ಷದ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ಪಾಲಕರು ನಿಗಾದಲ್ಲಿ ಮಾಸ್ಕ್‌ ಹಾಕಬೇಕು. 12ರಿಂದ 18 ವರ್ಷದ ಮಕ್ಕಳು ದೊಡ್ಡವರಂತೆ ಮಾಸ್ಕ್‌ ಧರಿಸಬೇಕು ಎಂದು ಸೂಚಿಸಿದೆ. ಸ್ಟಿರಾಯ್ಡ್ ಬಳಸುವುದಾದರೂ ಅದು 10 ರಿಂದ 14 ದಿನಕ್ಕೆ ಸೀಮಿತವಾಗಿರಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಐದು ವರ್ಷ ಮತ್ತು ಅದಕ್ಕೂ ಕೆಳಗಿನ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಪಡಿಸಿಲ್ಲ. 6-11 ವರ್ಷದ ಮಕ್ಕಳು ಮಾಸ್ಕ್ ಬಳಸುವ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ, ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಬಹುದು. 5 ವರ್ಷ ಮೀರಿದವರು, ವಯಸ್ಕರು ಕಡ್ಡಾಯವಾಗಿ ಧರಿಸುವಂತೆಯೇ ಮಾಸ್ಕ್ ಧರಿಸಬೇಕು ಎಂದು ಸರ್ಕಾರವು ಹೇಳಿದೆ. ಅಲ್ಲದೇ ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್‌ ಮಾಗ ಸೂಚಿಯನ್ನು ಹೊರಡಿಸಿದೆ

Exit mobile version