Site icon PowerTV

ವಿಶ್ವದಲ್ಲೇ ಮೋದಿ ನಂ.1

2021ರಲ್ಲೂ ಬಿಡುಗಡೆಯಾದ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರು ಮೊದಲ ಸ್ಥಾನದಲ್ಲಿದ್ದರು. ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯನ್ನು ಮಾರ್ನಿಂಗ್‌ ಕನ್ಸಲ್ಟ್‌ ಪೊಲಿಟಿಕಲ್ ಇಂಟೆಲಿಜೆನ್ಸ್‌ ಬಿಡುಗಡೆ ಮಾಡಿದೆ.

ಸಮೀಕ್ಷೆಯ ಪಟ್ಟಿಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಜಾಗತಿಕ ಪಟ್ಟಿಯಲ್ಲಿ ವಿಶ್ವದ 13 ನಾಯಕರು ಸ್ಥಾನ ಪಡೆದಿದ್ದಾರೆ. ಶೇ.71 ರೇಟಿಂಗ್‌ ಪಡೆದಿರುವ ಪ್ರಧಾನಿ ಮೋದಿ ಅವರು ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಶೇ.43 ರೇಟಿಂಗ್‌ ಪಡೆದಿದ್ದು, 6ನೇ ಸ್ಥಾನದಲ್ಲಿದ್ದಾರೆ. ಕೆನಡಾದ ಅಧ್ಯಕ್ಷ ಜಸ್ಟಿನ್‌ ಟ್ರುಡೋ ಕೂಡ ಶೇ.43 ರೇಟಿಂಗ್‌ ಪಡೆದು ಜೋ ಬೈಡೆನ್‌ ಅವರಿಗೆ ಸಮಾನಾಂತರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಶೇ.41 ರೇಟಿಂಗ್‌ ಪಡೆದುಕೊಂಡಿದ್ದಾರೆ.

 

Exit mobile version