Site icon PowerTV

ಅಮರ್ ಜವಾನ್ ಜ್ಯೋತಿ ವಿಲೀನಕ್ಕೆ ರಾಹುಲ್ ಗಾಂಧಿ ವಿರೋಧ

ನವದೆಹಲಿ: 50 ವರ್ಷಗಳ ಇತಿಹಾಸವಿರುವ ಅಮರ್ ಜವಾನ್ ಜ್ಯೋತಿಯ ಜ್ವಾಲೆಯನ್ನು ನ್ಯಾಷನಲ್ ವಾರ್ ಮ್ಯಮೋರಿಯಲ್ ಜ್ಯೋತಿಯೊಂದಿಗೆ ವಿಲೀನಗೊಳಿಸಿ ಅಮರ್ ಜವಾನ್ ಜ್ಯೋತಿಯ ಇತಿಹಾಸವನ್ನು ಕೊನೆಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಭಾರತದ ಐಕಾನ್ ಆಗಿರುವ ಇಂಡಿಯಾ ಗೇಟ್​ನಲ್ಲಿ ಯಾವಾಗಲೂ ಪ್ರಜ್ವಲಿಸುತ್ತಿದ್ದ ಅಮರ್ ಜವಾನ್ ಜ್ಯೋತಿ ಇದೀಗ ಕೇಂದ್ರ ಸರ್ಕಾರದ ಈ ಕ್ರಮದಿಂದ ಆರಿಹೋಗಲಿದೆ.

ಕೆಲವರಿಗೆ ದೇಶಭಕ್ತಿ ಮತ್ತು ಬಲಿದಾನಗಳ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಹೀಗಾಗಿಯೇ ಅವರು ಇಂಥ ಅನಾಹುತವನ್ನು ಮಾಡುತ್ತಿದ್ದಾರೆ. ಇದು ನಮ್ಮ ವೀರ ಸೈನಿಕರ ಬಲಿದಾನಕ್ಕೆ ಕೇಂದ್ರ ಮಾಡಿದ ಅಪಚಾರವಾಗಿದೆ. ಇರಲಿ, ಅಮರ ಜವಾನ್ ಜ್ಯೋತಿಯ ಜ್ವಾಲೆಯನ್ನು ನಾವು ಮತ್ತೆ ಹೊತ್ತಿಸುತ್ತೇವೆ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.

Exit mobile version