Site icon PowerTV

ಭಾರತ ದಕ್ಷಿಣ ಆಫ್ರಿಕ 2ನೇ ಏಕದಿನ ಪಂದ್ಯ ಆರಂಭ

ಬೊಲಾಂಡ್ ಪಾರ್ಕ್​ (ದಕ್ಷಿಣ ಆಫ್ರಿಕ): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಇಂದು ಬೊಲಾಂಡ್ ಪಾರ್ಕ್​ನ ಪಾರ್ಲ್​ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಕರ್ನಾಟಕದ ಕೆ.ಎಲ್.ರಾಹುಲ್ ಕ್ಯಾಪ್ಟನ್ ಆಗಿದ್ದಾರೆ. ರಾಹುಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಭಾರತದ ಪರ 11 ಆಟಗಾರರಲ್ಲಿ ಕೆ.ಎಲ್.ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯರ್, ರಿಶಭ್ ಪಂತ್, ವೆಂಕಟೇಶ್ ಐಯ್ಯರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ಹಾಗೂ ಯಜುವೇಂದ್ರ ಚಹಲ್ ಇದ್ದಾರೆ.

ದಕ್ಷಿಣ ಆಫ್ರಿಕಾ 11 ಆಟಗಾರರಲ್ಲಿ ಕ್ವಾಂಟನ್ ಡಿ ಕಾಕ್, ಮಲಾನ್, ಮಾರ್ಕ್ರಮ್, ಭುವಾಮ್, ಡುಸೆನ್, ಮಿಲ್ಲೆರ್, ಮಗಲಾ, ಮಹಾರಾಜ್, ಶಂಶಿ, ಪೆಹ್ಲುಕ್ವಾಯೊ ಮತ್ತು ಲುಂಗಿ ನಗಿಡಿ ಆಡುತ್ತಿದ್ದಾರೆ.

ಆರಂಭಿಕ ಆಟಗಾರರಾಗಿ ಕೆ.ಎಲ್. ರಾಹುಲ್ ಹಾಗೂ ಶಿಖರ್ ಧವನ್ ಆಡುತ್ತಿದ್ದಾರೆ. ಒಪನರ್ ಆಗಿ ರಾಹುಲ್ ಬ್ಯಾಟ್ ಮಾಡಿ ನಗಿಡಿ ಬೌಲಿಂಗನ್ನು ಎದುರಿಸಿ ಆಡುತ್ತಿದ್ದಾರೆ.

Exit mobile version