Site icon PowerTV

ಯುಪಿಯಲ್ಲಿ ಕಾಂಗ್ರೆಸ್ ಬಂದರೆ 20 ಲಕ್ಷ ಯುವಕರಿಗೆ ಕೆಲಸ ಕೊಡಲಿದ್ದೇವೆ-ರಾಗಾ

ನವದೆಹಲಿ: ಪ್ರಿಯಾಂಕ ವಾದ್ರಾ- ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಜಂಟಿ ಹೇಳಿಕೆಯೊಂದನ್ನು ನೀಡಿದ್ದಾರೆ.ಅದರಲ್ಲಿ ಅವರು ‘ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ,
ಯುವಕರಿಗೆ ಹೊಸ ಚೈತನ್ಯ ತುಂಬಬೇಕಿದೆ, ಚುನಾವಣೆ ಜೊತೆಗೆ ಯುವಕರಿಗಾಗಿ ನೂತನ ಉತ್ತರ ಪ್ರದೇಶ ನಿರ್ಮಿಸಬೇಕಿದೆ’ ಎಂದು ಹೇಳಿದ್ದಾರೆ.

ಮುಂದುವರೆದು ಅವರು ತಮ್ಮ ಜಂಟಿ ಹೇಳಿಕೆಯಲ್ಲಿ  ’16 ಲಕ್ಷ ಯುವಕರು ನಿರುದ್ಯೋಗ ಸಮಸ್ಯೆಯನ್ನು ಎದುರಿಸ್ತಿದ್ದಾರೆ. ಆದರೆ ಇಲ್ಲಿನ ಸರಕಾರ ದೊಡ್ಡ ದೊಡ್ಡ ಭರವಸೆಯನ್ನು ಮಾತ್ರ ಕೊಡುತ್ತದೆಯೇ ಹೊರತು
ಇದುವರೆಗೆ ಯಾವುದೇ ಭರವಸೆಗಳು ಈಡೇರಿಸಿಲ್ಲ. ಕಾಂಗ್ರೆಸ್ ಬಿಡುಗಡೆ ಮಾಡುತ್ತಿರುವ ಪ್ರಣಾಳಿಕೆ ಯುವಕರಿಗೆ ಸಹಾಯವಾಗಲಿದೆ, ಕಾಂಗ್ರೆಸ್ 20 ಲಕ್ಷ ಕೆಲಸ ಕೊಡಿಸಲಿದೆ’ ಎಂದು ಹೇಳಿದ್ದಾರೆ.

Exit mobile version