Site icon PowerTV

ಜ್ಯೋತಿಷಿಗೆ ಹನಿಟ್ರ್ಯಾಪ್ ಮಾಡಿದ ಯುವಜೋಡಿ

ಚಿಕ್ಕಮಗಳೂರು: ಜ್ಯೋತಿಷಿಗೆ ಹನಿಟ್ರ್ಯಾಪ್ ಮಾಡಿ 49ಲಕ್ಷ ರೂಪಾಯಿ ಪೀಕಿಸಿದ ಜೋಡಿಯೊಂದನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ಜೋಡಿಯು ಚಿಕ್ಕಮಗಳೂರು ಮೂಲದ ಜ್ಯೋತಿಷಿಗೆ ಹನಿಟ್ಯ್ರಾಪ್ ಮಾಡಿ ಹಂತಹಂತವಾಗಿ 49 ಲಕ್ಷ ರೂಪಾಯಿಗಳನ್ನು ಪೀಕಿಸಿದ್ದರು ಎಂದು ವರದಿಯಾಗಿದೆ.

ಭವ್ಯ(30) ಕುಮಾರ್@ರಾಜು(35) ಬಂಧಿತರಾಗಿರುವ ಯುವಜೋಡಿ. ಕಳೆದ ಅಗಸ್ಟ್ ನಿಂದಲೂ ಜ್ಯೋತಿಷಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಈ ಜೋಡಿ ಜ್ಯೋತಿಷಿಯ ಬಳಿ ಬ್ಲ್ಯಾಕ್​ಮೇಲ್ ಮಾಡಿ ಸಂಪಾದಿಸಿದ್ದ ಹಣದಲ್ಲಿ ಫ್ಲ್ಯಾಟ್ ಹಾಗೂ ವಾಹನವನ್ನು ಖರೀದಿ ಮಾಡಿದ್ದರು. ಭವ್ಯ ಸೋಮವಾರಪೇಟೆಯ ಶನಿವಾರ ಸಂತೆಯ ನಿವಾಸಿಯಾಗಿದ್ದರೆ, ಕುಮಾರ್ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಯಾಗಿದ್ದಾನೆ. ಭವ್ಯ ಗಂಡನನ್ನು ಬಿಟ್ಟು ಎರಡು ವರ್ಷಗಳಿಂದ ಕುಮಾರ್ ಜೊತೆ ವಾಸವಿದ್ದಳು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Exit mobile version