Site icon PowerTV

ಆಶ್ರಯ ಮನೆ‌ ನೀಡುವಂತೆ ಆಗ್ರಹಿಸಿ ಪಂಚಾಯತಿಯಲ್ಲೇ ವಾಸ ಮಾಡಿದ ಕುಟುಂಬ

ರಾಯಚೂರು:ಆಶ್ರಯ ಮನೆ‌ ನೀಡುವಂತೆ ಆಗ್ರಹಿಸಿ ಪಂಚಾಯತಿಯಲ್ಲೇ ವಾಸ ಮಾಡಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊನ್ನಳಿ ಗ್ರಾ.ಪಂ ನಲ್ಲಿ‌‌ ನಡೆದಿದೆ.

ಗ್ರಾಮದ ಬೀರಪ್ಪ-ಶಾರದ ದಂಪತಿ ಮಕ್ಕಳೊಂದಿಗೆ ಗ್ರಾ.ಪಂನಲ್ಲಿ ಧರಣಿ ಮಾಡಿದ್ದು.ಮನೆ ಮಂಜೂರು ಮಾಡುವವರೆಗೂ ಗ್ರಾ.ಪಂನಲ್ಲಿ ಸಂಸಾರ ನಡೆಸುವುದಾಗ ಪಟ್ಟು ಹಿಡಿದಿದ್ದಾರೆ.ನಮಗೆ ಇರಲು‌ ಮನೆ ಇಲ್ಲ, ಬಿಸಿಲು, ಮಳೆಯಲ್ಲಿ ಜೀವನ ಸವೆಯುತ್ತಿದೆ.ಹಸುಗಳ ಸಮೇತ ಗ್ರಾ.ಪಂನಲ್ಲಿ ದಂಪತಿ ಠಿಕಾಣಿ ಹೂಡಿದ್ದಾರೆ. ಮಕ್ಕಳನ್ನ ಕಟ್ಟಿಕೊಂಡು ಸೂರಿಲ್ಲದೆ ಹೇಗೆ ಜೀವನ ಮಾಡಬೇಕು.ಪ್ರತಿ ವರ್ಷ ಎಲ್ಲ ಸದಸ್ಯರಿಗೂ, PDOಗಳಿಗೆ ಕಾಲು ಬಿದ್ದರು ನಮಗೆ ಸೂರು‌ ನೀಡುತ್ತಿಲ್ಲ.ಸೂರು ನೀಡುವವರೆಗೂ ಗ್ರಾ.ಪಂನಲ್ಲಿ ನಾವು ಜೀವನ ಮಾಡುತ್ತೇವೆ. ಹಸುಗಳನ್ನು ಕಟ್ಟಿಹಾಕಿ, ಗ್ರಾ.ಪಂ ಒಳಗೆ ಅಡುಗೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದಾರೆ.

Exit mobile version