Site icon PowerTV

ಹಿಜಾಬ್​​​ ಧರಿಸೋದು ಅಶಿಸ್ತು: ಬಿ.ಸಿ ನಾಗೇಶ್‌

ಬೆಂಗಳೂರು : ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್‌ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕಾಲೇಜಿನಲ್ಲಿ 1985ರಿಂದ ಸಮವಸ್ತ್ರ ಜಾರಿಯಲ್ಲಿದ್ದು, SDMC ತೀರ್ಮಾನದಂತೆ ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕಾಲೇಜಿಗೆ ನೂರಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಸೇರ್ಪಡೆಯಾಗಿದ್ದಾರೆ.

ಎಲ್ಲಾ ವಿದ್ಯಾರ್ಥಿನಿಯರು ಮತ್ತು ಪೋಷಕರು ಸಮವಸ್ತ್ರ ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ. ಈ ಆರು ಮಂದಿ ವಿದ್ಯಾರ್ಥಿನಿಯರು ಸಹ 21 ದಿನಗಳ ಹಿಂದೆ ಹಿಜಾಬ್‌ ಧರಿಸಿ ಬರುತ್ತಿರಲಿಲ್ಲ. ದಾಖಲಾತಿ ವೇಳೆ ಸಮವಸ್ತ್ರ ಪಾಲನೆಯನ್ನು ಒಪ್ಪಿಕೊಂಡು, ಈಗ ಧಾರ್ಮಿಕ ಕಾರಣಗಳನ್ನು ನೀಡಿ ವಿರೋಧ ವ್ಯಕ್ತಪಡಿಸುವುದು ಅಶಿಸ್ತು ತಾನೆ? ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಅವರು ಪ್ರಶ್ನಿಸಿದ್ದಾರೆ.

Exit mobile version