Site icon PowerTV

ವೀಕೆಂಡ್ ಕರ್ಫ್ಯೂ ವಿರುದ್ಧ ಅಸಮಾಧಾನ: ಸಿ.ಟಿ ರವಿ

ಚಿಕ್ಕಮಗಳೂರು : 3ನೇ ಅಲೆಯಲ್ಲಿ ಜೀವಕ್ಕೆ ಅಪಾಯವಿಲ್ಲವೆಂಬುದು ಅನುಭವಕ್ಕೆ ಬಂದಿದೆ.ಜೀವಕ್ಕೆ ಅಪಾಯ ಇಲ್ಲವೆಂದ ಮೇಲೆ ಜೀವನ ನಡೆಯಬೇಕಲ್ವಾ ಎಂದು ಶಾಸಕ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಪಾಸಿಟಿವಿಟಿ ರೇಟ್ ಜಾಸ್ತಿ ಇದೆ, ತೀವ್ರತೆ ಕಡಿಮೆಯಿದೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕೂಡ ಕಡಿಮೆಯಿದೆ.ಲಾಕ್ ಡೌನ್, ಕರ್ಫ್ಯೂ ಅವನ್ನ ಕೈ ಬಿಡಬೇಕು ಎಂಬುದು ಜನರ ಅಪೇಕ್ಷೆಯನ್ನು ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ ಇದೇ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಆಲೋಚನೆ ಮಾಡಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Exit mobile version