Site icon PowerTV

ವೀಕೆಂಡ್‌ ಕರ್ಫ್ಯೂ ಭವಿಷ್ಯ ನಿರ್ಧಾರಕ್ಕೆ ಕೌಂಟ್‌ಡೌನ್

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ.ಈ ಕಾರಣದಿಂದಾಗಿ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಮಾಡಿದ್ದಾರೆ.ಬಾರ್ ,ಮಾಲಿಕರು ಮತ್ತು ಹೊಟೇಲ್ ಮಾಲಿಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ನಿರ್ಧಾರ ಕೈಗೊಳ್ಳಲಿದ್ದಾರೆ.

ಇನ್ನು 2 ಗಂಟೆಗಳ ಕಾಲ ಕರ್ಫ್ಯೂ ಭವಿಷ್ಯ ತಿಳಿಯಲಿದೆ. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.ವಿರೋಧ ಪಕ್ಷದವರಿಗೆ ಕೇವಲ ವಿರೋಧ ಮಾಡೋದೆ ಕೆಲಸ ಜೀವ ಮತ್ತು ಜೀವನ ಎರಡನ್ನೂ ಕಾಪಾಡುವ ಕೆಲಸ ಆಗುತ್ತದೆ.ಯಾವತ್ತಿಗೂ ಶುಕ್ರವಾರದ ದಿನ ಶುಭವಾಗಿಯೇ ಇರುತ್ತದೆ.ಈ ಶುಕ್ರವಾರವೂ ಕೂಡ ಶುಭ ಶುಕ್ರವಾರವೇ ಆಗಲಿದೆ.ಮಧ್ಯಾಹ್ನ ಸಿಎಂ, ಸಲಹಾ ಸಮಿತಿ ಅಭಿಪ್ರಾಯದ ಮೇರೆಗೆ ತೀರ್ಮಾನ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Exit mobile version