Site icon PowerTV

ಕೊರೋನ ಮಾರ್ಗಸೂಚಿ ಪ್ರಕಟ

ಬೆಂಗಳೂರು:  ಕೊರೋನಾ ಆರ್ಭಟ ರಾಜ್ಯಾದ್ಯಂತ ಮಿತಿ ಮೀರುತ್ತಿರುವುದರಿಂದ ರಾಜ್ಯಸರ್ಕಾರ ಸೋಂಕು ತಡೆಗೆ ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯಗೊಳಿಸಿದೆ. ಆದರೆ ಈಗಿನ ಮಾರ್ಗಸೂಚಿಯ ಪ್ರಕಾರ 11 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಇಲ್ಲವೆಂದು ಹೇಳಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಲ್ಲ. ಆದರೆ 6ರಿಂದ 11 ವರ್ಷದೊಳಗಿನ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.

ಸೋಂಕಿನ ತೀವ್ರತೆ ಎಷ್ಟೇ ಇದ್ದರೂ ಆ್ಯಂಟಿಬಾಡಿ ಔಷಧಿ ನೀಡಬಾರದು ಎಂದು ಸೂಚಿಸಲಾಗಿದೆ. ಜೊತೆಗೆ ಸ್ಟಿರಾಯ್ಡ್ ಬಳಕೆ ಮಾಡುವುದಾದರೆ 10ರಿಂದ 14ದಿನಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಕೋವಿಡ್ ನಿರ್ವಹಣೆ ಸಮೀತಿ ಮಾರ್ಗಸೂಚಿ ಪ್ರಕಟಿಸಿದೆ.

Exit mobile version