Site icon PowerTV

ನಟ ದುಲ್ಕರ್ ಸಲ್ಮಾನ್​ಗೆ ಕೊರೋನಾ ಪಾಸಿಟಿವ್​​

ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ಅವರಿಗೆ ಕೊರೋನಾ ಪಾಸಿಟಿವ್ ಬಂದ ಕೆಲವು ದಿನಗಳಲ್ಲಿ ಅವರ ಮಗ ದುಲ್ಕುರ್ ಸಲ್ಮಾನ್ ಅವರಿಗೂ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ.

ಸದ್ಯ ದುಲ್ಕರ್ ಸಲ್ಮಾನ್ ಅವರು ತಮಗೆ ಕೊರೋನಾ ಸೋಂಕು ದೃಢಪಟ್ಟಿರುವ ಬಗ್ಗೆ ತಮ್ಮ ಟ್ವಿಟರ್​​​ನಲ್ಲಿ  ಮಾಹಿತಿ ನೀಡಿದ್ದಾರೆ ಮತ್ತು ಮನೆಯಲ್ಲಿಯೇ ಐಸೋಲೇಶನ್‍ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ದಯವಿಟ್ಟು ಕ್ವಾರೆಂಟೈನ್​​​ನಲ್ಲಿರಿ ಮತ್ತು ಕೊರೋನಾ ಪರೀಕ್ಷೆಗೆ ಒಳಗಾಗಿ ಎಂದು ಟ್ವೀಟ್ ಮಾಡಿದ್ದಾರೆ.

Exit mobile version