Site icon PowerTV

‘ನನಗೂ ಸಿಎಂಗೂ ಭಿನ್ನಾಭಿಪ್ರಾಯವಿಲ್ಲ’

ಬಿಜೆಪಿಯ ಮುರುಗೇಶ್ ನಿರಾಣಿ ಆಗಾಗ ಸ್ವಪಕ್ಷೀಯರ ಮೇಲೆಯೇ ಆರೋಪಗಳನ್ನು ಮಾಡುತ್ತ ಹರಿಹಾಯುವುದು ಸಾಮಾನ್ಯ. ಇಂಥ ನಿರಾಣಿ ಈಗ ತಣ್ಣಗಾಗಿದ್ದಾರೆಯೇ ಎಂಬುದು ಅವರ ಇಂದಿನ ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಮಾತಿನಿಂದ ವ್ಯಕ್ತವಾಗುತ್ತದೆ. ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ದೂರು ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರ ಇದ್ದಾಗ, ಇಲ್ಲದಿದ್ದಾಗಲೂ ಸಮಚಿತ್ತದಲ್ಲೇ ಇದ್ದೇನೆ. ಸಿಎಂ, ವರಿಷ್ಠರ ನಿರ್ಧಾರ ಪಾಲಿಸುವ ವ್ಯಕ್ತಿ ನಾನು ಎಂದರು. ಕೆಲವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಸಿಎಂ ನನ್ನ ವಿರುದ್ಧ ದೂರು ನೀಡಲು ಸಾಧ್ಯವೇ ಇಲ್ಲ. ಒಂದೇ ಕಾಲೇಜಿನಲ್ಲಿ ಓದಿದ್ದೇವೆ. 30 ವರ್ಷಗಳ ಸಂಬಂಧ ಇದ್ದು, ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಕೇವಲ ರಾಜಕೀಯ ಮಾತ್ರ ಅಲ್ಲ. ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬಸವರಾಜ ಬೊಮ್ಮಾಯಿ ತಿಳಿ ಹೇಳುತ್ತಾ ಬಂದಿದ್ದಾರೆ ಎಂದಿದ್ದಾರೆ.

Exit mobile version