Site icon PowerTV

ಲಸಿಕೆಗೆ ಹೆದರಿ ಮರವೇರಿದ ವ್ಯಕ್ತಿ

ಭಾರತದಲ್ಲಿ ಕೋವಿಡ್ ರೂಪಾಂತರಿಗಳು ಹರಡುತ್ತಿರುವುದರಿಂದ ಕೊರೋನಾ ಲಸಿಕೆಯ ಅಭಿಯಾನ ಆರಂಭಿಸಲಾಗಿದೆ.

ಆದರೆ, ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಕೊವಿಡ್ ಲಸಿಕೆ ಜಾಗೃತಿ ಅಭಿಯಾನದಲ್ಲಿ ತೊಡಗಿರುವ ಅಧಿಕಾರಿಗಳ ತಂಡವು ಅಲ್ಲಿನ ಗ್ರಾಮಸ್ಥರಿಗೆ ಲಸಿಕೆ ಹಾಕಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಯಾವುದೇ ಕಾರಣಕ್ಕೂ ಕೊವಿಡ್ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಗಲಾಟೆ ಮಾಡಿದ ಗ್ರಾಮಸ್ಥರ ಮನವೊಲಿಸಿ, ಲಸಿಕೆ ಹಾಕುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಯಿತು.

ಈ ವೇಳೆ ವ್ಯಕ್ತಿಯೊಬ್ಬರು ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಮರ ಹತ್ತಿ ಕುಳಿತ ಘಟನೆಯೂ ನಡೆಯಿತು.

Exit mobile version