Site icon PowerTV

‘ಶಾಲೆಗಳು ಸುರಕ್ಷಿತ ತಾಣ’:ಸಚಿವ ಬಿ.ಸಿ ನಾಗೇಶ್ 

ಬೆಂಗಳೂರು : ಶಾಲೆ ಪ್ರಾರಂಭ ಮಾಡಿ ಅಂತ ತಜ್ಞರು ಗ್ರೀನ್ ಸಿಗ್ನಲ್ ಕೊಟ್ಟರೆ, ಮರು ದಿನವೇ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಜೊತೆಗೆ ಮಾತನಾಡಿದ ಅವರು, ಶುಕ್ರವಾರ ನಡೆಯುವ ಸಿಎಂ ಸಭೆಯಲ್ಲಿ ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ 1-9 ಅಥವಾ 5-9 ನೇ ತರಗತಿ ಪ್ರಾರಂಭ ಮಾಡುತ್ತೇವೆ. ಕೋವಿಡ್ ಪರಿಣಾಮ ಜಾಸ್ತಿ ಆಗದೇ ಹೋದರೆ ನಿಗದಿಯಂತೆ ಎಸ್‍ಎಸ್‍ಎಲ್‌ಸಿ, ದ್ವಿತೀಯ ಪಿಯುಸಿ ಎಕ್ಸಾಂ ಮಾಡಲಾಗುತ್ತದೆ. ಎಕ್ಸಾಂಗೆ ಎಲ್ಲಾ ಸಿ‌ದ್ಧತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಶಾಲೆಗಳು ಸುರಕ್ಷಿತ ತಾಣ ಆಗಿದೆ. ಅಗತ್ಯ ಬಿದ್ದರೆ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭ ಮಾಡುತ್ತೇವೆ ಅಂತ ಶಿಕ್ಷಣ ಸಚಿವರು ತಿಳಿಸಿದ್ದಾರೆ.

Exit mobile version