Site icon PowerTV

‘ಮೋದಿಗೆ ಗುರುಗಳ ಮೇಲೆ ಗೌರವವಿದೆ’:ಕೋಟ ಶ್ರೀನಿವಾಸ ಪೂಜಾರಿ

ಉಡುಪಿ :ನಾರಾಯಣಗುರುಗಳ ಸ್ತಬ್ಧಚಿತ್ರದ ವಿಚಾರವಾಗಿ ಕೇರಳ ಸರ್ಕಾರ ರಾಜಕೀಯ ಮಾಡುತ್ತಿದೆ. ಅನಾವಶ್ಯಕವಾಗಿ ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳ ಸರಕಾರದ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ದೂರ ಇಟ್ಟ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾರಾಯಣ ಗುರುಗಳ ಮೇಲೆ ವಿಶೇಷ ಗೌರವ ಇದೆ. ನಾರಾಯಣಗುರುಗಳ ವಿಚಾರಧಾರೆ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಮಾದರಿ ಎಂದು ಹೇಳಿದವ್ರು ಪ್ರಧಾನಿ ಮೋದಿ ಎಂದು ಕೋಟ ಸಮರ್ಥಿಸಿಕೊಂಡರು.

 

Exit mobile version