Site icon PowerTV

ಕ್ಯಾಸಿನೊ ಕೇಸ್​ಗೆ ಮೇಜರ್​​ ಟ್ವಿಸ್ಟ್​​​​​​​​​

ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಹಾಗೂ ಆತನ ಪಾಲುದಾರರ ಮಧ್ಯೆ ನಡೆದಿರುವ ಕ್ಯಾಸಿನೊ ಹೂಡಿಕೆ ವಿಚಾರದ ಜಗಳ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಇದೀಗ ಗಿರೀಶ್ ಗದಿಗೆಪ್ಪಗೌಡನ ಪತ್ನಿ ವಿಜಯಲಕ್ಷ್ಮಿ ಎಂಟ್ರಿ ಹೊಡೆದಿದ್ದು, ನನ್ನ ಪತಿ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ವಿಚ್ಚೇದನ ನೀಡಲು ಮುಂದಾಗಿದ್ದಾರೆ ಅಂತ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಇವರು, ಗೋವಾದಲ್ಲಿ ಕ್ಯಾಸಿನೊ ನಡೆಸುವ ವಿಚಾರದಲ್ಲಿ ಮತ್ತೋರ್ವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ, ರೌಡಿ ಶೀಟರ್ ಚೇತನ್ ಹಿರೇಕೇರೂರು ಹಾಗೂ ರಾಮ ತೀರ್ಥ ಹಾಗೂ ನನ್ನ ಪತಿ ಗಿರೀಶ್ ಗದಿಗೆಪ್ಪಗೌಡರ ಮಧ್ಯೆ ಗಲಾಟೆ ನಡೆದಿದೆ. ಆದರೆ ಅದಕ್ಕು ನನಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Exit mobile version