Site icon PowerTV

ಹಿಂದಿನ ಜನ್ಮದಲ್ಲಿ ನಾನು, ಶಾಸಕ ರಾಜುಗೌಡ ಅಣ್ಣ-ತಮ್ಮಂದಿರು – ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಹಿಂದಿನ ಜನ್ಮದಲ್ಲಿ ನಾನು ಮತ್ತು ಸುರಪುರ ಎಂಎಲ್​ಎ ರಾಜುಗೌಡ ಅಣ್ಣ-ತಮ್ಮಂದಿರು ಆಗಿದ್ದೆವು ಅನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಬುಧವಾರ ಹೇಳಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ಅವರಿಗೆ ಇಷ್ಟವಿರಲಿಲ್ಲ. ಆದರೆ, ಯಾವ ಜನ್ಮದ ಪುಣ್ಯವೋ ನನಗೆ ಗ್ರಾಮೀಣ ಜನರಿಗೆ ಕುಡಿಯುವ ನೀರು ಕೊಡುವ ಪುಣ್ಯ ಸಿಕ್ಕಿದೆ ಹಾಗೂ ನಿನಗೆ ನಗರ ಪ್ರದೇಶದ ಜನರಿಗೆ ನೀರು ಕೊಡುವ ಪುಣ್ಯ ಸಿಕ್ಕಿದೆ ಒಪ್ಪಿಕೋ ಅಂತಾ ಹೇಳಿದ್ದೆ ಎಂದರು.

ಅಧ್ಯಕ್ಷರಾದ ನಂತರ ರಾಜುಗೌಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಇನ್ನು ಉನ್ನತ ಸ್ಥಾನಕ್ಕೆ ಏರಲಿ ಹಾಗೂ ಮುಂದೆ ಯಾವಾಗ ಸಂಪುಟ ವಿಸ್ತರಣೆ ಆಗುತ್ತದೋ ಆಗ ರಾಜುಗೌಡ ಖಂಡಿತಾ ಮಂತ್ರಿ ಆಗುತ್ತಾರೆ ಎಂಬ ವಿಶ್ವಾಸ ನನಗೆ ಇದೆ.

ಅಲ್ಲದೇ, ನಾನು ಕುಡಿಯುವ ನೀರು ಕೊಡುತ್ತಿದ್ದೀನಿ. ನೀವು ಕೂಡ ಕುಡಿಯುವ ನೀರು ಕೊಡುತ್ತಿದ್ದೀರಿ. ನೀವು ಖಂಡಿತಾ ಮೇಲೆ ಬನ್ನಿ. ನಿಮಗೆ ಶಿವಮೊಗ್ಗ ಕ್ಷೇತ್ರದ ಜನರ ಆಶೀರ್ವಾದ ಸದಾ ಇದ್ದೇ ಇರುತ್ತದೆ. ಆ ನಂಬಿಕೆ ಮೇಲೆಯೇ ನಿಮಗೆ ಒಳ್ಳೆಯದಾಗುತ್ತದೆ ಎಂದು ಕೆ.ಎಸ್​ ಈಶ್ವರಪ್ಪ ಅವರು ಶಾಸಕ ರಾಜುಗೌಡ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Exit mobile version