Site icon PowerTV

ತಜ್ಞರ ಜೊತೆ ಸಿಎಂ ಸಭೆ

ಬೆಂಗಳೂರು : ದಿನದಿಂದ ದಿನಕ್ಕೆ ಕೊರೋನಾ ಹಾವಳಿ ಜಾಸ್ತಿಯಾಗಿದ್ದು ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಮಾಡಿದ್ದು.ತಜ್ಞರ ಜೊತೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಯಿ ಮಾತುಕತೆ ನಡೆಸಲಿದ್ದಾರೆ.

ಸಭೆಯಲ್ಲಿ ವಿಕೇಂಡ್ ಕರ್ಪ್ಯೂ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.ಈಗಾಗಲೇ ವಿಕೇಂಡ್ ಕರ್ಪ್ಯೂ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶವಿದ್ದು.ಹೀಗಾಗಿ ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಕೇಳಲಿದ್ದಾರೆ.

ಸದ್ಯ ಮೂರನೇ ಅಲೆ ವ್ಯಾಪಕವಾಗಿದ್ದರು ಅಷ್ಟೊಂದು ಎಫೆಕ್ಟ್ ಇಲ್ಲ ಹಾಗೆನೇ ಅಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆಯಾಗಿದೆ ಹೀಗಾಗಿ ಕೆಲವೊಂದು ರಿಲಕ್ಷೆಶನ್ ಗೆ ಸರ್ಕಾರ ಮುಂದಾಗಬಹುದು.ಆದರೆ ದಿಡೀರ್ ನಿರ್ಧಾರದಿಂದ ಮತ್ತೆ ತೊಂದರೆಯಾದರೆ ಅನ್ನುವ ಅತಂಕ‌ ಸಹ ಸರ್ಕಾರಕ್ಕಿದೆ.ಆದರೂ ಜನ ಜೀವನದ ದೃಷ್ಟಿಯಿಂದ ಕೆಲವೊಂದು ಸಡಿಲಿಕೆ ಮಾಡಬಹುದು.ಒಂದು ಪಕ್ಷ ಯಾವುದೇ ರಿಸ್ಕ್ ಬೇಡ ಅಂದರೆ ಇನ್ನೊಂದು ೧೦ ದಿನ ಯಥಾಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಹೀಗಾಗಿ ಬೆಂಗಳೂರು ಬಿಟ್ಟು ಬೇರೆ ಬೇರೆ ಜಿಲ್ಲೆಗೆ ವಿಕೇಂಡ್ ಕರ್ಪ್ಯೂ ನಿಂದ ಮುಕ್ತಿ ಸಾಧ್ಯತೆ ಇರಲಿದೆ ಈ ಬಗ್ಗೆ ಕೇಂದ್ರ ನಾಯಕರೇ ಸರ್ಕಾರದ ಕ್ರಮಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದು,ಹೀಗಾಗಿ‌ ತಜ್ಞರ ಜೊತೆ ಮಾತುಕತೆ ನಡೆಸಿ ಬಳಿಕ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

Exit mobile version