Site icon PowerTV

ಬೀದಿ ನಾಯಿ ದಾಳಿಗೆ ಬಾಲಕಿ ಬಲಿ

ಬೆಳಗಾವಿ: ಬೀದಿ ನಾಯಿ ಕಚ್ಚಿದ ಪರಿಣಾಮ ನಾಲ್ಕು ವರ್ಷದ ಕಂದಮ್ಮ ದಾರುಣವಾಗಿ ಮೃತ ಪಟ್ಟ ಹೃದಯ ಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ನಡೆದಿದೆ.

ಸೌಜನ್ಯ ಮಲ್ಲಪ್ಪ ಮುತ್ತೂರ ಎಂಬ ನಾಲ್ಕು ವರ್ಷದ ಬಾಲಕಿಗೆ ಬೀದಿ ನಾಯಿಯ  ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗಮದ್ಯದಲ್ಲೇ ಮೃತಪಟ್ಟಿದೆ.ಇದರಿಂದ ಪೋಷಕರ ಆಕ್ರಂದನವು ಮುಗಿಲು ಮುಟ್ಟಿದೆ.

ಸದ್ಯ, ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version