Site icon PowerTV

ಧನುಷ್​​-ಐಶ್ವರ್ಯ ಡಿವೋರ್ಸ್ ಬೆನ್ನಲ್ಲೇ ಅವರಿಬ್ಬರ ವಿಡಿಯೋ ವೈರಲ್

ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ತಮಿಳು ನಟ ವಿಜಯ್ ಅವರ 18 ವರ್ಷದ ದಾಂಪತ್ಯ ಅಂತ್ಯ ಕಂಡಿದ್ದು. ಆದರೆ ಇವರ ಮಧ್ಯೆ ಯಾವ ಕಾರಣಕ್ಕಾಗಿ ಬಿರುಕು ಮೂಡಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಆದರೆ ಸೋಶಿಯಲ್ ಮೀಡಿಯಾ ಮೂಲಕ ಧನುಷ್ ಮತ್ತು ಐಶ್ವರ್ಯ ತಮ್ಮ ದಿವೋರ್ಸ್​ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು ಐಶ್ವರ್ಯ ಮತ್ತು ಧನುಷ್ ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.ಇನ್ನು ಧನುಷ್ ಅವರ ಪ್ಯಾನ್ ಪೇಜ್​ನಲ್ಲಿ ಐಶ್ವರ್ಯ ಮತ್ತು ಧನುಷ್ ಅವರ ಕೆಲವು ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ.

ವಿಡಿಯೋಗಳ ಪೈಕಿ ಒಂದು ವಿಡಿಯೋ ಕೆಲ ತಿಂಗಳ ಹಿಂದೆಯಷ್ಟೇ ಹರಿ ಬಿಟ್ಟಿದ್ದು, ಇದರಲ್ಲಿ ಧನುಷ್ ತಮ್ಮ ಪತ್ನಿ ಐಶ್ವರ್ಯಗಾಗಿ ತಮ್ಮ ಮಾವ ಪೇಟಾ ಚಿತ್ರದ ಹಾಡನ್ನು ಹಾಡುತ್ತಾ ಬಂದು ಐಶ್ವರ್ಯ ಅವರನ್ನು ಅಪ್ಪಿಕೊಳ್ಳುತ್ತಾರೆ.ಈ ವೇಳೆ ಐಶ್ವರ್ಯ ನಾಚಿಕೊಳ್ಳುತ್ತಾರೆ.ಸದ್ಯದಲ್ಲಿ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು.ಅಷ್ಟೊಂದು ಅನೋನ್ಯವಾಗಿದ್ದ ಜೋಡಿ ಯಾಕೆ ದೂರಾಗಿದ್ದಾರೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಾರೆ.

Exit mobile version