Site icon PowerTV

ಒಂದೇ ದಿನಕ್ಕೆ 268 ಕೇಸ್ ಪತ್ತೆ, ಸಾವಿರಕ್ಕೆ ದಾಟಿದ ಸಕ್ರಿಯ ಸೋಕಿಂತರ ಸಂಖ್ಯೆ

ಚಾಮರಾಜನಗರ: ಕೊರೋನಾ ಸೋಕಿಂತರ ಸಂಖ್ಯೆಯಲ್ಲಿ ಏರುಗತಿ ಕಂಡಿದ್ದು ಇಂದು ಹೊಸದಾಗಿ 268 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಸಕ್ರಿಯ ಪ್ರಕರಣಗಳ ಸಂಖ್ಯೆ 1010ಕ್ಕೆ ಏರಿಕೆಯಾಗಿದೆ‌.

ಇಂದು 151 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು 572 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದಾರೆ. ಇಂದು ಮೂರು ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್‌ ನಡೆಸಿದ್ದು ಎರಡೂವರೆ ಸಾವಿರ ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆಯು ನಿಗಾ ಇಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿದ್ದು 184 ಹಳ್ಳಿಗರಲ್ಲಿ ಕೋವಿಡ್ ಪತ್ತೆಯಾಗಿದೆ.

ಮೂರೂವರೆ ಸಾವಿರ ಮಂದಿಗೆ ಲಸಿಕೆ ಕೊಡಲಾಗಿದ್ದು ಇವರಲ್ಲಿ 175 ಬೂಸ್ಟರ್ ಡೋಸ್, 2837 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಮೂರನೇ ಅಲೆಯಲ್ಲಿ ಓರ್ವ ಮಾತ್ರ ಮೃತಪಟ್ಟಿದ್ದು ಐಸಿಯುನಲ್ಲಿ ಒಬ್ಬರೂ ದಾಖಲಾಗಿಲ್ಲ ಎಂದು ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದೆ‌.

Exit mobile version